ಶಿವಮೊಗ್ಗದಲ್ಲಿ ನಕಲಿ ದಾಖಲೆ ಕೊಟ್ಟು, ಬ್ಯಾಂಕಿನಿಂದ ಲಕ್ಷ ಲಕ್ಷ ಗೃಹ ಸಾಲ ಪಡೆದು ವಂಚನೆ

SHIVAMOGGA LIVE NEWS |10 JANUARY 2023

ಶಿವಮೊಗ್ಗ : ನಕಲಿ ದಾಖಲೆ ಒದಗಿಸಿ ಬ್ಯಾಂಕ್ ಒಂದರಿಂದ ಗೃಹ ಸಾಲ ಪಡೆದು ವಂಚಿಸಲಾಗಿದೆ (fraud). ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 53 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Doddapete police station in shimoga

37 ಲಕ್ಷ ರೂ. ವಂಚನೆ

ಪ್ರೇಮ್ ಎಂಬಾತ ನಕಲಿ ದಾಖಲೆಗಳನ್ನು ಒದಗಿಸಿ ಪಿ.ಎನ್.ಬಿ ಬ್ಯಾಂಕಿನಿಂದ 37 ಲಕ್ಷ ರೂ. ಸಾಲ ಪಡೆದಿದ್ದಾನೆ. ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಈತ ನಕಲಿ (fraud) ದಾಖಲೆಗಳನ್ನು ಒದಗಿಸಿದ್ದ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

Shimoga Live News 3 Million reach

ಗೃಹ ಸಾಲಕ್ಕಾಗಿ ಸೇಲ್ ಡೀಡ್ ಅನ್ನು ಬ್ಯಾಂಕಿಗೆ ಒದಗಿಸಿದ್ದ. ಇವುಗಳ ಪರಿಶೀಲನೆ ಬಳಿಕ ಬ್ಯಾಂಕ್ ಸಾಲ ಮಂಜೂರು ಮಾಡಿತ್ತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೇಲ್ ಡೀಡ್ ಪರಿಶೀಲನೆಗೆ ಒಳಪಡಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಪ್ರೇಮ್ ಎಂಬಾತನ ವಿರುದ್ಧ ಬ್ಯಾಂಕ್ ವತಿಯಿಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬ್ಯಾಂಕಿಗೆ ಲಕ್ಷ ಲಕ್ಷ ರೂ. ವಂಚನೆ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ದೊಡ್ಡಪೇಟೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ತನಿಕೆ ನಡೆಯುತ್ತಿದೆ.

crime name image

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment