ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 16 JANUARY 2023
SHIMOGA : ಜ.28ರಂದು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ (grama vastavya) ಕಾರ್ಯಕ್ರಮ ನಿಗದಿಯಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆ ಇವತ್ತು ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ವಾಸ್ತವ್ಯಕ್ಕೆ ಗ್ರಾಮ ನಿಗದಿ
ಏನೆಲ್ಲ ಸೂಚನೆ ನೀಡಿದರು?
ಹೊಳಲೂರು ಗ್ರಾಮದ ಮಾರುತಿ ಪ್ರೌಢಶಾಲೆ ಆವರಣದಲ್ಲಿ ಜ.28 ರಂದು ಬೆಳಿಗ್ಗೆ 11 ರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭವಾಗಲಿದೆ. ತಾಲ್ಲೂಕು ಕಚೇರಿ ವ್ಯಾಪ್ತಿಯ 41 ಇಲಾಖೆಗಳಿಗೆ ಈಗಾಗಲೇ ಸಿದ್ದತೆ ಕುರಿತು ಮಾಹಿತಿ ನೀಡಲಾಗಿದೆ. ಅವಶ್ಯಕ ಸಿದ್ದತೆ ಮಾಡಿಕೊಳ್ಳಬೇಕು. ಫಲಾನುಭವಿಗಳ ಪಟ್ಟಿ ತಯಾರಿಸಿ, ಅವರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಬೇಕು. ಆದೇಶಗಳ ಸುಗಮ ವಿತರಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಡಾ. ನಾಗರಾಜ್ ಅವರು ಅಧಿಕಾರಿಗಳಿಗೆ ತಿಳಿಸಿದರು.

14 ಮಳಿಗೆ ತೆರೆಯಬೇಕು
ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಒದಗಿಸುವ ವಿವಿಧ 14 ಮಳಿಗೆಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಸೂಚನೆ ನೀಡಿದ್ದಾರೆ. ಅದರ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಹಶೀಲ್ದಾರ್ ಅವರು ತಿಳಿಸಿದರು.

ವಾಹನಗಳ ಪಾರ್ಕಿಂಗ್, ಸುಗಮ ಸಂಚಾರ, ಸುರಕ್ಷತಾ ವ್ಯವಸ್ಥೆ ಕುರಿತು ಪೊಲೀಸ್ ಇಲಾಖೆಯಿಂದ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಯಿತು.
ಇದನ್ನೂ ಓದಿ – ಇನ್ಮುಂದೆ ಶಿವಮೊಗ್ಗ ಲೈವ್ ಅಂದರೆ ಬರಿ ಸುದ್ದಿಯಲ್ಲ, ಇದು ನಮ್ಮೂರು ಅಂತಾ ನಾವೆಲ್ಲ ಹೆಮ್ಮೆಯಿಂದ ಬೀಗುವಂತೆ ಮಾಡುತ್ತೇವೆ
ಸಭೆಯಲ್ಲಿ ಡಿವೈಎಸ್ಪಿ ಸುರೇಶ್, ಉಪ ತಹಶೀಲ್ದಾರ್ ಗಣೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP














