ಶಿವಮೊಗ್ಗದಲ್ಲಿ ಅಸ್ವಸ್ಥ ಮಕ್ಕಳ ಸಂಖ್ಯೆ ಹೆಚ್ಚಳ, 100ಕ್ಕಿಂತಲೂ ಹೆಚ್ಚು ಮಕ್ಕಳು ಆಸ್ಪತ್ರೆಗೆ, ಜಿಲ್ಲಾಧಿಕಾರಿ ಭೇಟಿ

SHIVAMOGGA LIVE NEWS | 17 JANUARY 2023

SHIMOGA | ಹೊಟ್ಟೆ ನೋವು, ವಾಂತಿ, ಸುಸ್ತು ಎಂದು ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ (children admitted) ಸಂಖ್ಯೆ ಏರಿಕೆಯಾಗುತ್ತಿದೆ. ಇದು ಜಿಲ್ಲಾಡಳಿತಕ್ಕೆ ತಲೆ ನೋವು ತಂದಿದೆ. ಈವರೆಗೂ 108 ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Shivamogga-Live-Number-1-Website

Children-Admitted-to-Mc-Gann-Hospital

ಸೋಮವಾರ ಸಂಜೆಯಿಂದ ರಾತ್ರಿವರೆಗೆ ಮೊರಾರ್ಜಿ ವಸತಿ ಶಾಲೆಯ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾತ್ರಿ ಇಡಿ ಮಕ್ಕಳಿಗೆ (children admitted) ಚಿಕಿತ್ಸೆ ನೀಡಲಾಗಿದೆ.

ನಡುರಾತ್ರಿ ಮತ್ತೊಂದು ಪ್ರಕರಣ

ಸೋಮವಾರ ಮಧ್ಯ ರಾತ್ರಿ ಹೊತ್ತಿಗೆ ಬಾಪೂಜಿನಗರದ ಹಾಸ್ಟೆಲ್ ಒಂದರ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಅವರಲ್ಲು ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಕೂಡಲೆ ವಿದ್ಯಾರ್ಥಿನಿಯರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ಚಿಕಿತ್ಸೆ ನೀಡಲಾಗಿದ್ದು, ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.

ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಸಿಮ್ಸ್ ನಿರ್ದೇಶಕರು, ವೈದ್ಯರ ಜೊತೆ ಸಮಾಲೋಚನೆ ನಡೆಸಿದರು. ಮಕ್ಕಳ ಬಳಿ ತೆರಳಿ ಆರೋಗ್ಯ ವಿಚಾರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಫುಡ್ ಪಾಯ್ಸನ್ ಆಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಯಾವುದರಿಂದ ಸಮಸ್ಯೆಯಾಗಿದೆ ಅನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ. ಮಕ್ಕಳನ್ನು 24 ಗಂಟೆ ಪರಿಶೀಲನೆ ನಡೆಸಲಾಗುತ್ತಿದೆ. ಇಂದು ಬೆಳಗ್ಗೆ ಕೂಡ 8 ಮಕ್ಕಳು ಬಂದು ದಾಖಲಾಗಿದ್ದಾರೆ. ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದರು.

ಪೋಷಕರು, ಮಕ್ಕಳಿಗೆ ಆತಂಕ

ಅಸ್ವಸ್ಥರಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳವಾಗಿರುವುದು ಮಕ್ಕಳು, ಪೋಷಕರಲ್ಲಿ ಆತಂಕ ಮೂಡಿಸಿದೆ. ವೈದ್ಯರು, ಮೆಗ್ಗಾನ್ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ಪೋಷಕರಿಗೆ ಧೈರ್ಯ ಹೇಳುತ್ತಿದ್ದಾರೆ. ಅಲ್ಲದೆ ಮಕ್ಕಳಿಗೆ ಸ್ಥೈರ್ಯ ತುಂಬ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಸಾಮಾಜಿಕ ಜಾಲತಾಣದಲ್ಲಿ ಯುವಕರು, ಉದ್ಯೋಗಾಕಾಂಕ್ಷಿಗಳ ವಿಭಿನ್ನ ಅಭಿಯಾನ, ಏನದು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 17, 2023

ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

Hulikal Ghat Closed for Traffic Following Landslide; Alternate Routes Announced

Hulikal Ghat Closed for Traffic Following Landslide; Alternate Routes Announced

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

Leave a Comment