ನಿಷೇಧಿತ ಸಂಘಟನೆ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಮೂಲಕ ಯುವಕನಿಗೆ ಬೆದರಿಕೆ, ಒಬ್ಬ ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 JANUARY 2023

RIPPONPETE | ಸಾಮಾಜಿಕ ಜಾಲತಾಣದಲ್ಲಿ ನಿಷೇಧಿತ ಪಿಐಎಫ್ (PFI) ಸಂಘಟನೆ ಹೆಸರಿನಲ್ಲಿ ಬೆದರಿಕೆ ಒಡ್ಡಿದ ಆರೋಪ ಸಂಬಂಧ ಓರ್ವ ಯುವಕನನ್ನು ಬಂಧಿಸಲಾಗಿದೆ. ಕೆಳದ ತಿಂಗಳು ಇನ್‍ಸ್ಟಾಗ್ರಾಮ್ (INSTAGRAM) ಮೂಲಕ ವಾರ್ನಿಂಗ್ ಎಂದು ಸಂದೇಶ ಕಳುಹಿಸಿದ್ದ.

instagram

ಕೆಂಚನಾಲ (KENCHANALA) ಗ್ರಾಮದ ಸುಮಂತ್ ಎಂಬಾತನಿಗೆ ಇನ್‍ಸ್ಟಾಗ್ರಾಮ್ (INSTAGRAM) ಮೂಲಕ ಬೆದರಿಕೆ ಒಡ್ಡಲಾಗಿತ್ತು. ಡಿ.12ರಂದು ಇನ್‍ಸ್ಟಾಗ್ರಾಮ್ ನೋಡುತ್ತಿದ್ದಾಗ ಬೆದರಿಕೆ ಮೆಸೇಜ್ ಕಳುಹಿಸಿರುವುದು ಗೊತ್ತಾಗಿದೆ. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ಸಾಗರ (SAGARA) ತಾಲೂಕಿನ ಜಾವೇದ್ ಅಹಮ್ಮದ್ ಎಂಬಾತನನ್ನು ಬಂಧಿಸಿದ್ದಾರೆ. ಇನ್‍ಸ್ಟಾಗ್ರಾಮ್ ನಲ್ಲಿ ‘ಒನ್ಲಿ ಪಿಎಫ್ಐ’ ಎಂಬ ಖಾತೆಯ ಮೂಲಕ ಸುಮಂತ್ ಗೆ ಬೆದರಿಕೆ ಒಡ್ಡಿದ್ದ.

Shimoga Live 3 Million Views

ಇದನ್ನೂ ಓದಿ – ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?

ಹೊಸನಗರ ಸಿಪಿಐ ಗಿರೀಶ್ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಾನಂದ, ಸಿಬ್ಬಂದಿ ಶಿವಕುಮಾರ್ ನಾಯ್ಕ್, ರಾಮಚಂದ್ರ, ಇಂದ್ರೇಶ್, ಉಮೇಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment