ಶಿವಮೊಗ್ಗದಲ್ಲಿ ಈ ಸರ್ತಿ 4 ದಿನ ಫಲಪುಷ್ಪ ಪ್ರದರ್ಶನ, ಥೀಮ್ ಏನು? ರೈತರು, ಮಹಿಳೆಯರಿಗಿದೆ ಸ್ಪರ್ಧೆ

SHIVAMOGGA LIVE NEWS | 23 JANUARY 2023

SHIMOGA | ಎರಡು ವರ್ಷದ ಬಳಿಕ ಶಿವಮೊಗ್ಗ ನಗರದಲ್ಲಿ ಮತ್ತೆ ಫಲಪುಷ್ಪ ಪ್ರದರ್ಶನ (flower show) ಆಯೋಜಿಸಲಾಗುತ್ತಿದೆ. ಪ್ರದರ್ಶನದಲ್ಲಿ ಈ ಭಾರಿಯು ಹಲವು ವಿಶೇಷತೆಗಳು ಇರಲಿವೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಎನ್.ಪ್ರಕಾಶ್ ಅವರು ತಿಳಿಸಿದರು.

Shivamogga-Live-Number-1-Website

Shimoga-Flower-show-press-meet

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಎನ್.ಪ್ರಕಾಶ್ ಅವರು, ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಕೋವಿಡ್ ಹಿನ್ನೆಲೆ ಎರಡು ವರ್ಷ ಫಲಪುಷ್ಪ (flower show) ಪ್ರದರ್ಶನವಿರಲಿಲ್ಲ. ಈ ಭಾರಿ ಜ.26 ರಿಂದ ನಾಲ್ಕು ದಿನ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.

 ಈ ಭಾರಿ ಏನೆಲ್ಲ ವಿಶೇಷತೆ ಇರಲಿದೆ? 

ಈ ಭಾರಿ ಗಂಧದಗುಡಿ ಥೀಮ್ ಅಳವಡಿಸಲಾಗಿದೆ. ಜಿಲ್ಲೆಯ ಸಸ್ಯ ಸಂಪತ್ತು ಮತ್ತು ವನ್ಯಜೀವಿ ಆಕೃತಿಗಳನ್ನು ನಿರ್ಮಿಸಲಾಗುತ್ತದೆ. ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹೂವಿನ ಕಲಾಕೃತಿ ನಿರ್ಮಾಣ ಮಾಡಲಾಗುತ್ತದೆ. ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿ, ಶಿವಮೊಗ್ಗ ಸ್ಮಾರ್ಟ್ ಸಿಟಿ ಮಾದರಿ, ಹೂವಿನ ಫೋಟೋ ಫ್ರೇಮ್ ಗಳು, ಮಕ್ಕಳಿಗೆ ಆಕರ್ಷಕ ಹೂವಿನ ಕಲಾಕೃತಿಗಳನ್ನು ರೂಪಿಸಲಾಗುತ್ತದೆ ಎಂದು ಜಿ.ಎನ್.ಪ್ರಕಾಶ್ ತಿಳಿಸಿದರು.

Flower Show in Shimoga

ರೈತರು, ಮಹಿಳೆಯರು, ಸಂಸ್ಥೆಗಳಿಗೆ ಸ್ಪರ್ಧೆ

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ರೈತರು, ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದೆ. ರೈತರಿಗೆ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶಿಕೆಗಳ ಸ್ಪರ್ಧೆ ಇದೆ. ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆ ಇದೆ. ಹೂವು, ಮೊಗ್ಗು, ಎಲೆ, ಹಣ್ಣು, ಧಾನ್ಯಗಳನ್ನು ಬಳಸಿ ರಂಗೋಲಿ ರಚಿಸಬಹುದು. ಇನ್ನು, ಮನೆ, ಶಾಲೆ, ಅಂಗನವಾಡಿ, ಕಚೇರಿ, ಖಾಸಗಿ ಸಂಸ್ಥೆಗಳಿಗೆ ಕೈತೋಟ, ತಾರಸಿ ತೋಟ, ಉದ್ಯಾನವನಗಳ ಸ್ಪರ್ಧೆ ಆಯೋಜಿಸಲಾಗಿದೆ.

Flower Show in Shimoga

ಮಳಿಗೆಗಳು, ವಿವಿಧ ಸ್ಪರ್ಧೆ, ಆಹಾರ ಮೇಳ

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಮಳಿಗೆಗಳನ್ನು ಹಾಕಲಾಗುತ್ತಿದೆ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ವತಿಯಿಂದ ವನ್ಯಜೀವಿ ಲೋಕದ ಪರಿಚಯದ ಮಳಿಗೆ. ವಿವಿಧ ಇಲಾಖೆಗಳ ಯೋಜನೆಗೆ ಸಂಬಂಧಿಸಿದ ಮಳಿಗೆಗಳು. ಸ್ವಸಹಾಯ ಸಂಘಗಳಿಗು ಕೂಡ ಮಳಿಗೆ ಸ್ಥಾಪಿಸಲಾಗುತ್ತಿದೆ. ಇದೆ ವೇಳೆ ಕೈತೋಟ, ಅಲಂಕಾರಿಕಾ ಹೂವುಗಳು, ಕುಬ್ಜಗಿಡಗಳು, ಅಣಬೆಗಳು, ಜೇನುಕೃಷಿ, 5 ಸಾವಿರ ವಿವಿಧ ಜಾತಿಯ ಆಕರ್ಷಕ ಹೂ ಕುಂಡಗಳ ಪ್ರಾತ್ಯಕ್ಷಿಕೆಗಳು ಇರಲಿವೆ.

3 Million Views Shimoga Live

ಫಲಪುಷ್ಪ ಪ್ರದರ್ಶನದ ಆವರಣದಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿ.ಎನ್.ಪ್ರಕಾಶ್ ತಿಳಿಸಿದರು.

Flower Show in Shimoga

ಪ್ರವೇಶ ಶುಲ್ಕ ಎಷ್ಟು?

ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ವಯಸ್ಕರಿಗೆ 10 ರೂ. ಮಕ್ಕಳಿಗೆ 5 ರೂ. ನಿಗದಿಪಡಿಸಲಾಗಿದೆ. ಶಾಲೆ ವತಿಯಿಂದ ಶಿಕ್ಷಕರ ಜೊತೆಗೆ ಬರುವ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ ಎಂದು ಜಿ.ಎನ್.ಪ್ರಶಾಶ್ ತಿಳಿಸಿದರು.

ಇದನ್ನೂ ಓದಿ – OLXನಲ್ಲಿ ಖರೀದಿಸುವಾಗ ಜೋಕೆ, ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು ಮೋಸ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 23, 2023

ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

ತಾಳಗುಪ್ಪ ಇಂಟರ್‌ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್‌, ಆಗಿದ್ದೇನು?

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

Hulikal Ghat Closed for Traffic Following Landslide; Alternate Routes Announced

Hulikal Ghat Closed for Traffic Following Landslide; Alternate Routes Announced

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

Leave a Comment