VISL | ಭದ್ರಾವತಿಯಲ್ಲಿ ಸರ್ವ ಪಕ್ಷಗಳು, ಸಂಘಟನೆಗಳ ಸಭೆ, ಏನೆಲ್ಲ ಚರ್ಚೆಯಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 JANUARY 2023

BHADRAVATHI | ವಿಐಎಸ್ಎಲ್ ಉಳಿವಾಗಿ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಭದ್ರಾವತಿಯಲ್ಲಿ ಸರ್ವ ಪಕ್ಷ ಮತ್ತು ಸಂಘಟನೆಗಳ ಸಭೆ (all party meeting) ನಡೆಸಲಾಯಿತು.

VISL Bhadravathi 1

ನ್ಯೂ ಟೌನ್ ಶ್ರೀ ಶಾರದಾ ಮಂದಿರದಲ್ಲಿ ನಡೆದ ಸಭೆಯಲ್ಲಿ (all party meeting) ವಿವಿಧ ಪಕ್ಷಗಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಹೋರಾಟದ ರೂಪುರೇಷೆ ಕುರಿತು ಚರ್ಚೆ ನಡೆಸಲಾಯಿತು. ಅಲ್ಲದೆ ಪಕ್ಷಾತೀತ ಹೋರಾಟ ನಡೆಸಿದರಷ್ಟೆ ವಿಐಎಸ್ಎಲ್ ಉಳಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಯಾರೆಲ್ಲ ಏನೆಲ್ಲ ಹೇಳಿದರು?

ವಿಐಎಸ್ಎಲ್ ಉಳಿವು ಭದ್ರಾವತಿಯ ಉಳಿವು. ಆದ್ದರಿಂದ ಕಾರ್ಖಾನೆಯ ಉಳಿವಿಗಾಗಿ ಹೋರಾಟ ನಡೆಸಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.ಚಂದ್ರೇಗೌಡ, ಕಾಂಗ್ರೆಸ್ ನಗರ ಅಧ್ಯಕ್ಷ
ವಿಐಎಸ್ಎಲ್ ಉಳಿವಾಗಿ ಎಲ್ಲರು ಒಂದಾಗಿ ಹೋರಾಟ ಮಾಡೋಣ. ಈಗಾಗಲೇ ನಮ್ಮ ಪಕ್ಷದ ಮುಖಂಡರ ನಿಯೋಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿದ್ದೇವೆ. ಅವರು ಕೇಂದ್ರ ಸರ್ಕಾರದೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.ಕರುಣಾಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ

VISL-issue-All-Party-Meeting

ಎಲ್ಲಾ ಪಕ್ಷಗಳ ನಾಯಕರು ಅವರವರ ಪಕ್ಷದ ಮುಖಂಡರ ಮೇಲೆ ಒತ್ತಡ ತರಬೇಕಿದೆ. ಮಠಾಧೀಶರು ಈ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಬೇಕು. ಭದ್ರಾವತಿ ಬಂದ್ ಮಾಡಿ ಹೋರಾಟ ನಡೆಸೋಣ.ಬಿ.ಕೆ.ಮೋಹನ್, ನಗರಸಭೆ ಸದಸ್ಯ

ಇದನ್ನೂ ಓದಿ – ಡಿವೈಎಸ್ಪಿ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ, ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಇಡೀ ರಾತ್ರಿ ಹೋರಾಟ

ಪಕ್ಷಾತೀತ ಹೋರಾಟಕ್ಕೆ ಕರೆ

ಇನ್ನು, ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಪ್ರಮುಖರು ಪಕ್ಷಾತೀತ ಹೋರಾಟದ ಅಗತ್ಯತೆ ತಿಳಿಸಿದರು. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ JOB FAIR, ಇನ್ಫೋಸಿಸ್, ಬೆಂಗಳೂರು ಏರ್ ಪೋರ್ಟ್ ಸೇರಿ 40ಕ್ಕೂ ಹೆಚ್ಚು ಕಂಪನಿ ಭಾಗಿ, ನೋಂದಣಿ ಶುರು

Shimoga Live 3 Million Views

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 26, 2023

Leave a Comment