ಹೊಳೆ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿ ಮೃತದೇಹ | ಶಿವಮೊಗ್ಗ ಜಿಲ್ಲೆಯ 4 CRIME NEWS

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 FEBRURARY 2023

ಅಪರಿಚತ ವ್ಯಕ್ತಿ ಸಾವು

SHIMOGA : ನಗರದ ಬೆಕ್ಕಿನಕಲ್ಮಠದ ಸರ್ಕಲ್ ಬಳಿ ಇರುವ ಅರಳೀಮರದ ಕಟ್ಟೆಯ ಮೇಲೆ ಮಲಗಿದ್ದ ಸುಮಾರು 45 ರಿಂದ 50 ವರ್ಷದ ವ್ಯಕ್ತಿಯು ಫೆ.08 ರಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ಸುಮಾರು 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ತಲೆಯಲ್ಲಿ 4 ಇಂಚು ಉದ್ದದ ಕಪ್ಪು ಕೂದಲು, ಕುರುಚಲು ಗಡ್ಡ, ಬಲಗೈ ಮೇಲೆ ಪಾಲಯ್ಯ ಮತ್ತು ಮಂಜು ಎಂಬ ಹಚ್ಚೆ ಗುರುತು ಇದೆ. ವಾರಸುದಾರರು ಯಾರಾದರೂ ಇದ್ದಲ್ಲಿ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂ: 08182-261400, ಉಪವಿಭಾಗದ ಸಂಖ್ಯೆ: 081812-261404, ಕೋಟೆ ಪೊಲೀಸ್ ಠಾಣೆ ಸಂಖ್ಯೆ: 08182-261415 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Crime-News-General-Image

ಪಾಲಿಕೆ ಕಸದ ಗಾಡಿ ಡಿಕ್ಕಿ, ಸಾವು

SHIMOGA : ಮಹಾನಗರ ಪಾಲಿಕೆಯ ಕಸದ ಗಾಡಿಯೊಂದು ಬೈಕಿಗೆ ಡಿಕ್ಕಿ ಹೊಡೆದಿದ್ದು, ಯುವಕ ಸಾವನ್ನಪ್ಪಿದ್ದಾನೆ. ವಾದಿ ಎ ಹುದಾ ನಿವಾಸಿ ಸಮೀರ್ (20) ಮೃತ ದುರ್ದೈವಿ. ಎನ್.ಟಿ.ರಸ್ತೆಯ ಟೆಂಪೋ ಸ್ಟಾಂಡ್ ಬಳಿ ಸಮೀರ್ ತೆರಳುತ್ತಿದ್ದ ಬೈಕಿಗೆ ಕಸದ ಗಾಡಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಮೀರ್ ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ವೇಳೆಗಾಗಲೆ ಸಮೀರ್ ಕೊನೆಯುಸಿರೆಳೆದಿದ್ದ. ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲವಗೊಪ್ಪದಲ್ಲಿ ಬೈಕಿ ಡಿಕ್ಕಿ

SHIMOGA : ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ನೀರು ಕುಡಿಯುತ್ತಿದ್ದಾಗ ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಸೊರಬದ ನವೀನ್ ಕುಮಾರ್ ಗಾಯಗೊಂಡಿದ್ದಾರೆ. ಶಿವಮೊಗ್ಗದ ಮಲವಗೊಪ್ಪದ ಪೆಟ್ರೋಲ್ ಬಂಕ್ ನಿಂದ ಸ್ವಲ್ಪ ಮಂದೆ ನವೀನ್ ಕುಮಾರ್ ಬೈಕ್ ನಿಲ್ಲಿಸಿ, ಕೆಳಗಿಳಿದು ನೀರು ಕುಡಿಯುತ್ತಿದ್ದರು. ಭದ್ರಾವತಿ ಕಡೆಯಿಂದ ಬಂದ ಮತ್ತೊಂದು ಬೈಕ್ ನವೀನ್ ಕುಮಾರ್ ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ನವೀನ್ ಕುಮಾರ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ AIRPORT JOBS ಹೆಸರಲ್ಲಿ ಭದ್ರಾವತಿ ವ್ಯಕ್ತಿಗೆ ವಂಚನೆ, ಯಾವೆಲ್ಲ ಕಾರಣಕ್ಕೆ ಹಣ ಪಡೆದಿದ್ದಾರೆ? ಇಲ್ಲಿದೆ ಡಿಟೇಲ್ಸ್

ಓಮ್ನಿ ಡಿಕ್ಕಿ, ಬೈಕ್ ಸವಾರ ಸಾವು

SAGARA : ತಾಲೂಕಿನ ಶೆಟ್ಟಿಕೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಬಳಿಕ ಓಮ್ನಿ ಕಾರು, ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಅರುಣ್ (24) ಮೃತಪಟ್ಟಿದ್ದಾನೆ. ಮತ್ತೊಬ್ಬ ಸವಾರ ಅಜಯ್, ಕಾರಿನಲ್ಲಿದ್ದ ರಂಜನ್, ಸಹನಾ ಎಂಬುವವರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಗಾಯಾಳುಗಳನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಆರುಣ್ ಮೃತಪಟ್ಟಿರುವುದಾಗಿ ಘೋಷಿಸಿದರು. ಓಮ್ನಿ ಚಾಲಕ ಆಶೀಕ್ ಎಂಬಾತನ ವಿರುದ್ಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ರಾತ್ರೋರಾತ್ರಿ ಶಿವಮೊಗ್ಗದ ಶಾಲೆಗೆ ನುಗ್ಗಿದ ಕಿಡಿಗೇಡಿಗಳು, ಸಿಸಿಟಿವಿ ಪೀಸ್ ಪೀಸ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 10, 2023

Leave a Comment