ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 FEBRURARY 2023
SHIMOGA : ಮುಖ್ಯ ರೈಲ್ವೆ ನಿಲ್ದಾಣದ (Railway Station) ಸೈನ್ ಬೋರ್ಡ್ ನಲ್ಲಿ ಮತ್ತೊಂದು ಭಾಷೆ ಸೇರ್ಪಡೆಯಾಗಿದೆ. ಈವರೆಗೂ ಮೂರು ಭಾಷೆಯಲ್ಲಿ ಶಿವಮೊಗ್ಗ ಟೌನ್ (Shimoga Town) ಎಂದು ಬರೆಯಲಾಗಿತ್ತು. ಈಗ ಸಂಸ್ಕೃತದಲ್ಲಿಯು (Sanskrit) ಊರಿನ ಹೆಸರು ಪ್ರಕಟಿಸಲಾಗಿದೆ.
ರೈಲ್ವೆ ನಿಲ್ದಾಣದಲ್ಲಿರುವ (Railway Station) ಊರಿನ ಹೆಸರಿನ ಬೋರ್ಡ್ ಗಳಲ್ಲಿ ಸಂಸ್ಕೃತದಲ್ಲಿ ಶಿವಮೊಗ್ಗ ಟೌನ್ ಎಂದು ಬರೆಯಿಸಲಾಗಿದೆ. ಈವರೆಗೂ ತ್ರಿಭಾಷಾ ಸೂತ್ರದಂತೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಊರಿನ ಹೆಸರು ಪ್ರಕಟಿಸಲಾಗಿತ್ತು. ಈಚೆಗೆ ರೈಲ್ವೆ ಇಲಾಖೆ ಸಂಸ್ಕೃತ ಭಾಷೆಯಲ್ಲಿಯು ಊರಿನ ಹೆಸರು ಪ್ರಕಟಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ‘ಸಿಟಿ ಸೆಂಟರ್’ ಮಾದರಿ ರೆಡಿಯಾಗಲಿದೆ ಶಿವಮೊಗ್ಗ ಜಿಲ್ಲೆಯ 3 ರೈಲ್ವೆ ನಿಲ್ದಾಣಗಳು
ಸಂಸ್ಕೃತದ ಬರಹ ಬಹುತೇಕ ಹಿಂದಿ ಭಾಷೆಯನ್ನೆ ಹೋಲುವಂತಿದೆ. ಹಾಗಾಗಿ ಸಂಸ್ಕೃತ ಗೊತ್ತಿಲ್ಲದವರು ಗೊಂದಲಕ್ಕೀಡಾಗಿದ್ದಾರೆ. ಹಿಂದಿಯಲ್ಲಿ ಎರಡು ಭಾರಿ ಊರಿನ ಹೆಸರು ಪ್ರಕಟಿಸಲಾಗಿದೆ ಎಂದು ಸೈನ್ ಬೋರ್ಡ್ ಗಮನಿಸುವಂತಾಗಿದೆ.
ಇದನ್ನೂ ಓದಿ – ವಿದ್ಯಾನಗರ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಕಂಪ್ಲೀಟ್, ಡ್ರೋಣ್ ಫೋಟೊಗಳು ವೈರಲ್