ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಬಳಿ ಬೈಕ್ ನಿಲ್ಲಿಸುವವರೆ ಹುಷಾರ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 FEBRURARY 2023

SHIMOGA : ನಗರದ ಸಿಟಿ ಸೆಂಟರ್ (City Centre) ಮುಂಭಾಗ ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bike theft reference image

ಆರ್.ಎಂ.ಎಲ್ ನಗರದ ದಾಮೋದರ ಎಂಬುವವರಿಗೆ ಸೇರಿದ ಹೀರೋ ಪ್ಯಾಷನ್ ಬೈಕ್ ಕಳ್ಳತನವಾಗಿದೆ. ದಾಮೋದರ ಅವರು ಫೆ.15ರಂದು ಸಂಜೆ 4.30ರ ಹೊತ್ತಿಗೆ ತಮ್ಮ ಬೈಕನ್ನು ಸಿಟಿ ಸೆಂಟರ್ ಮಾಲ್ ಪಕ್ಕದಲ್ಲಿ ನೆಹರೂ ರಸ್ತೆಯಲ್ಲಿರುವ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದರು. ಮಾಲ್ ಒಳಗೆ ಹೋಗಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ – ಗಾಜನೂರು ರಸ್ತೆಯಲ್ಲಿ ದರೋಡೆಗೆ ಪ್ಲಾನ್, ಶಿವಮೊಗ್ಗದ ಲಾಡ್ಜ್ ನಲ್ಲಿ ಸ್ಕೆಚ್, ಐವರ ವಿರುದ್ಧ ಕೇಸ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 18, 2023

Leave a Comment