ಭದ್ರಾವತಿ ಬಂದ್ ಗೆ ದಿನಾಂಕ ನಿಗದಿ, ಅವತ್ತು ಹೇಗಿರುತ್ತೆ ಹೋರಾಟ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 FEBRURARY 2023

BHADRAVATHI : ವಿಐಎಸ್ಎಲ್ ಪುನಶ್ಚೇತನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು, ನಾಗರಿಕರ ಬೆಂಬಲದೊಂದಿಗೆ ಭದ್ರಾವತಿ ಸ್ವಯಂ ಪ್ರೇರಿತ ಬಂದ್ (bandh) ಮಾಡಲು ಕಾರ್ಮಿಕರು ನಿರ್ಧರಿಸಿದ್ದಾರೆ. ಫೆ.24ರಂದು ಭದ್ರಾವತಿ ಬಂದ್ ಗೆ ಕರೆ ನೀಡಲಾಗಿದೆ.

Bhadravathi News Graphics
knief assault

ಇದನ್ನೂ ಓದಿ – ಭದ್ರಾವತಿಯಲ್ಲಿ ಕಾರ್ಮಿಕರಿಂದ ವಿಐಎಸ್ಎಲ್ ಕಾರ್ಖಾನೆ ಅಪ್ಪಿಕೋ ಚಳವಳಿ

ಫೆ.24ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪಟ್ಟಣದಲ್ಲಿ ಬಂದ್ (bandh) ಮಾಡಲು ತೀರ್ಮಾನಿಸಲಾಗಿದೆ. ಆ ದಿನ ಬೆಳಗ್ಗೆ 9 ಗಂಟೆಯಿಂದ ಮೆರವಣಿಗೆ ನಡೆಸಲಾಗುತ್ತದೆ. ವಿಐಎಸ್ಎಲ್ ಮುಂಭಾಗದಿಂದ ಡಾ. ಅಂಬೇಡ್ಕರ್ ವೃತ್ತ, ಬಿ.ಹೆಚ್.ರಸ್ತೆ, ಚನ್ನಗಿರಿ ರಸ್ತೆ ಮೂಲಕ ತಹಶೀಲ್ದಾರ್ ಕಚೇರಿ ತಲುಪಲಾಗುತ್ತದೆ ಎಂದು ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಹೆಚ್.ಜಿ.ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ – ‘ವಿಐಎಸ್ಎಲ್ ಬಂದ್ ಆಗಲು ಬಿಜೆಪಿ ಸರ್ಕಾರವೇ ಕಾರಣ’, ಶಿವಮೊಗ್ಗದಲ್ಲಿ ಆಕ್ರೋಶ

ವಿಐಎಸ್ಎಲ್ ಪುನಶ್ಚೇತನಕ್ಕಾಗಿ ಕಾರ್ಮಿಕರು ಕಳೆದ 33 ದಿನದಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಭದ್ರಾವತಿಯಿಂದ ಬೈಕ್ ಜಾಥಾ, ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ರಸ್ತೆ ತಡೆ, ಕಾರ್ಮಿಕರ ಆಕ್ರೋಶ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 21, 2023

Leave a Comment