ಸವಳಂಗ ರಸ್ತೆಯಲ್ಲಿ ಬೈಕುಗಳು ಮುಖಾಮುಖಿ ಡಿಕ್ಕಿ, ಗಂಭೀರ ಗಾಯ, ಎಸ್ಕಾರ್ಟ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 FEBRUARY 2023

SHIMOGA : ಅಬ್ಬಲಗೆರೆ ಸಮೀಪ ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಎಸ್ಕಾರ್ಟ್ ವಾಹನದ (Police Escort) ಪೊಲೀಸ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯಿಂದಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Bikes at Abbalagere in Savalanga road

ಜಗದೀಶ್ ನಾಯ್ಕ್ ಮತ್ತು ಮಂಜುನಾಥ್ ಗಾಯಾಳುಗಳು. ಸವಳಂಗ ರಸ್ತೆಯಲ್ಲಿ ಅಬ್ಬಲಗೆರೆ ಸಮೀಪ ಬೈಕುಗಳು ಡಿಕ್ಕಿಯಾಗಿ ಇಬ್ಬರು ಗಾಯಗೊಂಡು, ರಸ್ತೆ ಮೇಲೆ ಬಿದ್ದಿದ್ದರು. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜಗದೀಶ್ ನಾಯ್ಕ್ ಅವರಿಗೆ ಗಂಭೀರ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಎಸ್ಕಾರ್ಟ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ

ಇನ್ನು, ಇದೆ ದಾರಿಯಲ್ಲಿ ಬಂದ ಎಸ್ಕಾರ್ಟ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ವಾಹನಕ್ಕೆ ಶಿವಮೊಗ್ಗ ಪೊಲೀಸರು ಎಸ್ಕಾರ್ಟ್ (Police Escort) ನೀಡಿದ್ದರು. ಕರ್ತವ್ಯ ಮುಗಿಸಿ ಎಸ್ಕಾರ್ಟ್ ವಾಹನದ ಚಾಲಕ, ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಸತೀಶ್ ಮತ್ತು ಎ.ಆರ್.ಎಸ್.ಐ ರವಿಕುಮಾರ್ ಶಿವಮೊಗ್ಗಕ್ಕೆ ಮರಳುತ್ತಿದ್ದರು. ಈ ವೇಳೆ ಅಪಘಾತವಾಗಿರುವುದನ್ನು ಗಮನಿಸಿ, ಗಾಯಾಳುಗಳನ್ನು ಜೀಪಿನಲ್ಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ.

ಇದನ್ನೂ ಓದಿ – ಪ್ರಧಾನಿ ಕಾರ್ಯಕ್ರಮದ ವೇದಿಕೆ ಮುಂದೆ ಬಾಯಿ ಬಡಿದುಕೊಂಡು ಗಮನ ಸೆಳೆಯಲು ಯತ್ನಿಸಿದ ಕಾರ್ಮಿಕರು

JNNCE College Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 28, 2023

Leave a Comment