ಕೆಲಸ ಹುಡುಕುತ್ತಿರುವವರೆ ಹುಷಾರ್, ಕೆಲಸ ಕೊಡುವುದಾಗಿ ಶಿವಮೊಗ್ಗದ ಯುವಕನಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MARCH 2023

SHIMOGA : ಉದ್ಯೋಗ (job scam) ಕೊಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷ ಲಕ್ಷ ರುಪಾಯಿ ವಂಚನೆ ಮಾಡಿರುವ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರ ವ್ಯಕ್ತಿಗೆ ವಂಚನೆಗೆ ಒಳಗಾಗಿದ್ದಾನೆ.

Online-Fraud-In-Shimoga

ಮೊಬೈಲಿಗೆ ಬಂತು ಉದ್ಯೋಗದ ಮೆಸೇಜ್

ಮಾ.3ರಂದು ಯುವಕನ ಟೆಲಿಗ್ರಾಂ ಆ್ಯಪ್ ಗೆ ‘ಕೆಲಸ (job scam) ಕೊಡಲಾಗುತ್ತದೆ. ಅದಕ್ಕೂ ಮೊದಲು ಟಾಸ್ಕ್ ಪೂರೈಸಿ ಹೆಚ್ಚಿನ ಗಳಿಕೆ ಮಾಡಿ’ ಎಂದು ಮೆಸೇಜ್ ಬಂದಿತ್ತು. ಇದನ್ನು ನಂಬಿ, ಮಸೇಜಿನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಮತ್ತೊಂದು ಮೊಬೈಲ್ ನಂಬರ್ ತೋರಿಸಿದ್ದು, ಅದಕ್ಕೆ ಯುವಕ ಟೆಲಿಗ್ರಾಂ ಮೂಲಕ ಮೆಸೇಜ್ ಕಳುಹಿಸಿದ್ದ. ಮೊದಲಿಗೆ 2 ಸಾವಿರ ರೂ. ಮೊತ್ತದ ಟಾಸ್ಕ್ ಪೂರೈಸಿ ಎಂದು ಆ ನಂಬರ್ ನಿಂದ ಮೆಸೇಜ್ ಬಂದಿತ್ತು.

ನಂಬಿಕೆ ಹುಟ್ಟಿಸಲು 2800 ರೂ. ಹಾಕಿದರು

ಯುವಕ ತನ್ನ ಫೋನ್ ಪೇ ಮೂಲಕ 2 ಸಾವಿರ ರೂ. ಹಣ ವರ್ಗಾಯಿಸಿ ಮೊದಲ ಟಾಸ್ಕ್ ಕಂಪ್ಲೀಟ್ ಮಾಡಿದ್ದ. ಸ್ವಲ್ಪ ಹೊತ್ತಿಗೆ ಯುವಕನ ಖಾತೆಗೆ 2800 ರೂ. ಹಣ ಹಿಂತಿರುಗಿ ಬಂದಿತ್ತು. ಇದನ್ನು ನಂಬಿದ ಯುವಕ ಮರುದಿನ ಮುಂದಿನ ಟಾಸ್ಕ್ ಗಳನ್ನು ಕಂಪ್ಲೀಟ್ ಮಾಡಲು ಆರಂಭಿಸಿದ. ಹಂತ ಹಂತವಾಗಿ ಟಾಸ್ಕ್ ನೀಡಿದ್ದು, ಯುವಕ ತನ್ನ ಎರಡು ಬ್ಯಾಂಕ್ ಖಾತೆಗಳಿಂದ 2.60 ಲಕ್ಷ ರೂ. ಹಣವನ್ನು ಟಾಸ್ಕ್ ನೀಡಿದವರ ಖಾತೆಗೆ ವರ್ಗಾಯಿಸಿದ್ದಾನೆ.

ಇದನ್ನೂ ಓದಿ – ಬೈಕ್ ಬಣ್ಣ ಬದಲು, ಸೈಲೆನ್ಸರ್ ಮಾರ್ಪಾಡು, ಯುವಕನಿಗೆ ಕೋರ್ಟ್ ದಂಡ

2.60 ಲಕ್ಷ ರೂ. ಹಣ ಕಳೆದುಕೊಂಡ ಮೇಲೆ ಆತಂಕಗೊಂಡ ಯುವಕ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದಾನೆ. ವಂಚನೆಗೊಳಗಾಗಿರುವುದು ಆತನ ಅರಿವಿಗೆ ಬಂದಿದೆ. ಘಟನೆ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 7, 2023

Leave a Comment