ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 8 MARCH 2023
SHIMOGA : ತುರ್ತು ಕಾಮಗಾರಿಗಳ ಹಿನ್ನೆಲೆ ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧೆಡೆ ಮಾರ್ಚ್ 9ರಂದು ವಿದ್ಯುತ್ (Power Cut) ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಮಗಳಲ್ಲಿ ಕರೆಂಟ್ ಇರಲ್ಲ
ಮೆಸ್ಕಾಂ ಮಾಚೇನಹಳ್ಳಿ ವಿವಿ ಕೇಂದ್ರದ ಎಫ್-3 ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದೆ. ಈ ವ್ಯಾಪ್ತಿಯಲ್ಲಿ ಮಾರ್ಚ್ 9 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯತ್ ವ್ಯತ್ಯಯವಾಗಲಿದೆ. ಬಿದರೆ, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ಊರಡಗಡೂರು ಸುತ್ತಮುತ್ತ
ಮೆಸ್ಕಾಂ ಮಂಡ್ಲಿ ವಿವಿ ಕೇಂದ್ರದ ಊರಗಡೂರು ಫೀಡರ್-7 ರಲ್ಲಿ ಕಂಬ ಸ್ಥಳಾಂತರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಈ ವ್ಯಾಪ್ತಿಯಲ್ಲಿ ಮಾರ್ಚ್ 9 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ನಿಂಗಪ್ಪ ಲೇಔಟ್, ಸೂಳೆಬೈಲು, ಊರಗಡೂರು, ಮದಾರಿಪಾಳ್ಯ, ಮಳಲಿಕೊಪ್ಪ, ಇಂದಿರಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ (Power Cut) ವ್ಯತ್ಯಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗದ ವಿದ್ಯಾನಗರದ ಮನೆ ಮೇಲೆ ಅರಣ್ಯ ಇಲಾಖೆ ಸಿಐಡಿ ಮೊಬೈಲ್ ಸ್ಕ್ವಾಡ್, ಪೊಲೀಸರ ದಾಳಿ

LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP



