ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 8 MARCH 2023
SHIMOGA : ಹೋಳಿ (holi) ಹುಣ್ಣಿಮೆಯನ್ನು ಶಿವಮೊಗ್ಗದಲ್ಲಿ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ನಗರಾದ್ಯಂತ ಯುವಕರು ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಹಿರಿಯರನ್ನದೆ ಎಲ್ಲರೂ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದಾರೆ. ಕುಟುಂಬದವರು, ಸ್ನೇಹಿತರು ಬಣ್ಣ ಹಚ್ಚಿಕೊಂಡು ಖುಷಿ ಪಡುತ್ತಿದ್ದಾರೆ.

ನಗರ ಗೋಪಿ ಸರ್ಕಲ್ ನಲ್ಲಿ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ (holi) ಹಬ್ಬ ಆಚರಣೆ ಮಾಡಲಾಗುತ್ತಿದೆ. ಬಣ್ಣ ಹಚ್ಚಿಕೊಂಡು, ತಮಟೆ ಮತ್ತು ಹಾಡಿಗೆ ಯುವಕರು ಡಾನ್ಸ್ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಭಾರಿಯು ಗಾಂಧಿ ಬಜಾರ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಯುವಕರು ಹಬ್ಬದ ಆಚರಣೆ ಮಾಡುತ್ತಿದ್ದಾರೆ.

ಇನ್ನು, ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು ಶಿವಮೊಗ್ಗ ನಗರದ ವಿವಿಧೆಡೆ ಬೈಕ್ ರೈಡ್ ಮಾಡುತ್ತಿದ್ದಾರೆ. ನಗರದಾದ್ಯಂತ ಬೈಕ್‍ನಲ್ಲಿ ಸುತ್ತಾಡಿದ ಯುವಕರು, ಬಣ್ಣ ಎರಚುತ್ತಿದ್ದಾರೆ. ಹೋಳಿ ಹಬ್ಬದ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ – ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

LATEST NEWS
- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

- ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP













