ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಆಪರೇಷನ್ ಅಮಾನತ್, ವಾರಸುದಾರರನ್ನು ತಲುಪಿತು ಪಾಸ್ ಪೋರ್ಟ್ ಇದ್ದ ಬ್ಯಾಗ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 MARCH 2023

TALAGUPPA : ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಬ್ಯಾಗನ್ನು ರೈಲ್ವೆ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ. ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ (Bag) ಸಿಕ್ಕಿತ್ತು. ಇದನ್ನು ರೈಲ್ವೆ ಪೊಲೀಸ್ ಸಿಬ್ಬಂದಿ ಜಯರಾಂ ಅವರು ವಶಕ್ಕೆ ಪಡೆದಿದ್ದರು.

Talaguppa-railway-station-Bag-given-back-to-passanger

ಬ್ಯಾಗಿನಲ್ಲಿ (Bag) ಪಾಸ್ ಪೋರ್ಟ್, ಡೆಬಿಟ್ ಕಾರ್ಡ್, ಬೆಡ್ ಶೀಟ್, ಬಟ್ಟೆಗಳು ಇದ್ದವು. ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಈ ಬ್ಯಾಗನ್ನು ಮರೆತು ಹೋಗಿದ್ದರು. ವಾರಸುದಾರರನ್ನು ಪತ್ತೆ ಹಚ್ಚಿದ ರೈಲ್ವೆ ಪೊಲೀಸರು, ಬ್ಯಾಗನ್ನು ಹಸ್ತಾಂತರ ಮಾಡಿದ್ದಾರೆ.

ಪ್ರಯಾಣಿಕರು ಬಿಟ್ಟು ಹೋಗಿರುವ ಬ್ಯಾಗು, ವಸ್ತುಗಳನ್ನು ಅವರಿಗೆ ಮರಳಿಸಲು ರೈಲ್ವೆ ಇಲಾಖೆ ಪೊಲೀಸರು ಆಪರೇಷನ್ ಅಮಾನತ್ ಯೋಜನೆ ಅಡಿ ಕೆಲಸ ಮಾಡುತ್ತಿದ್ದಾರೆ. ವಸ್ತುಗಳು ನಿಜವಾದ ಮಾಲೀಕರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ – ವಿಐಎಸ್ಎಲ್ ಕುರಿತು ಕಾರ್ಮಿಕರ ನಿಯೋಗಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಭರವಸೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment