₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

Sunrise Facility Services, Sri sai Trust Shimoga

ಶಿವಮೊಗ್ಗ: ಬಾಕಿ ಇರುವ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳ ಮಂಜೂರಾತಿಗಾಗಿ ಲಂಚ ಪಡೆಯುತ್ತಿದ್ದ ಸಂದರ್ಭ ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ನಾಗೇಂದ್ರಪ್ಪ ಎ.ಕೆ. ಮತ್ತು ಅವರ ಮಧ್ಯವರ್ತಿ ಮಂಜುನಾಥ್ ಎಂಬುವವರನ್ನು ಶಿವಮೊಗ್ಗ ಲೋಕಾಯುಕ್ತ (Lokayukta) ಪೊಲೀಸರು ಸೋಮವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಸಹೋದ್ಯೋಗಿಗೆ ಲಂಚಕ್ಕೆ ಬೇಡಿಕೆ

ಭದ್ರಾವತಿ ಬಿ.ಇ.ಓ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಲಿಂಗರಾಜು ಎಂಬುವವರು 2011 ರಿಂದ 2023 ರ ಅವಧಿಯ ತಮ್ಮ ವಾರ್ಷಿಕ ವೇತನ ಬಡ್ತಿ ಮತ್ತು ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಹಲವು ಬಾರಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಬಿ.ಇ.ಓ ನಾಗೇಂದ್ರಪ್ಪ ಮತ್ತು ಮಧ್ಯವರ್ತಿ ಮಂಜುನಾಥ್ ಅವರು ₹4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

Bhadravathi-BEO-Nagendrappa-lokayukta-trap

ಈ ಕುರಿತು ಲಿಂಗರಾಜು ಅವರು ನೀಡಿದ ದೂರಿನನ್ವಯ ಸೋಮವಾರ ಸಂಜೆ 7 ಗಂಟೆಗೆ ಲೋಕಾಯುಕ್ತ ಪೊಲೀಸರು ಬಿ.ಇ.ಓ ಕಚೇರಿಯಲ್ಲಿ ದಾಳಿ ನಡೆಸಿದರು. ದೂರುದಾರರಿಂದ ₹1,00,000 ಲಂಚ ಹಣವನ್ನು ಪಡೆಯುತ್ತಿದ್ದ ಸಂದರ್ಭ ಬಿ.ಇ.ಒ ನಾಗೇಂದ್ರಪ್ಪ.ಎ.ಕೆ ಮತ್ತು ಮಧ್ಯವರ್ತಿ ಮಂಜುನಾಥ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಲಂಚದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಸರಕು ರೇಟ್‌ ಕುಸಿತ, ಉಳಿದ ಮಾದರಿ ಅಡಿಕೆ ರೇಟ್‌ ಎಷ್ಟಿದೆ? | 2 ಮಾರ್ಚ್‌ 2026

ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಮ್.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಚಂದ್ರಶೇಖರ್.ಬಿ.ಪಿ. ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ವೀರಬಸಪ್ಪ ಎಲ್. ಕುಸಲಾಪುರ, ಗುರುರಾಜ್ ಎನ್. ಮೈಲಾರ, ಸಿಬ್ಬಂದಿ ಯೋಗೇಶ್ ಜಿ.ಸಿ, ಮಂಜುನಾಥ ಎಂ, ಟೀಕಪ್ಪ, ಸುರೇಂದ್ರ ಹೆಚ್.ಜಿ., ಪ್ರಶಾಂತ್ ಕುಮಾರ್ ಹೆಚ್, ಚನ್ನೇಶ, ಅರುಣ್ ಕುಮಾರ್ ಯು.ಬಿ, ದೇವರಾಜ್ ವಿ, ಪ್ರಕಾಶ್ ಬಾರಿಮರದ, ಮತ್ತು ಆದರ್ಶ್, ಚಂದ್ರಿಬಾಯಿ ಎಸ್, ಪ್ರದೀಪ, ಚೇತನ್, ತರುಣ್‌ಕುಮಾರ್, ಆಂಜನೇಯ ಡಿ.ಹೆಚ್, ಆನಂದ, ಮತ್ತು ಗೋಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

number-1-advt-copy-new.webp
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 3, 2026 at 8:35 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 3, 2026

Leave a Comment