ಶಿವಮೊಗ್ಗದಲ್ಲಿ ಇಬ್ಬರಿಗೆ ಚಾಕು ಚುಚ್ಚಿದ್ದರು, ನಾಲ್ವರಿಗೆ ದೊಣ್ಣೆಯಿಂದ ಹೊಡೆದಿದ್ದರು, ಐವರಿಗೆ ಜೈಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 APRIL 2023

SHIMOGA : ಹಳೆ ದ್ವೇಷದ ಹಿನ್ನೆಲೆ ಇಬ್ಬರು ಯುವಕರಿಗೆ ಚಾಕು ಚುಚ್ಚಿ, ನಾಲ್ವರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಕಠಿಣ ಜೈಲು ಶಿಕ್ಷೆ (Jail), ದಂಡ ವಿಧಿಸಲಾಗಿದೆ. ಐವರು ಆರೋಪಿಗಳಿಗೆ ಜೈಲು ಶಿಕ್ಷೆಯಾಗಿದೆ.

Shivamogga Court 1

ಏನಿದು ಕೇಸ್?

2018ರ ಜನವರಿ 21ರಂದು ಶಿವಮೊಗ್ಗದ ಕೊರಮರ ಕೇರಿಯ ವಿಜಯ್ ಕುಮಾರ್, ಪ್ರವೀಣ್, ನವೀನ, ಚೇತನ್ ಮತ್ತು ಸಂತೋಷ್ ಎಂಬುವವರು ಹಳೆ ದ್ವೇಷದ ಹಿನ್ನೆಲೆ ಗೋವಿಂದಾಪುರದ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಗೋವಿಂದಾಪುರದ ನವೀನ್ ಮತ್ತು ನಿತಿನ್ ಎಂಬುವವರ ಮೇಲೆ ಚಾಕುವಿನಿಂದ ಹೊಟ್ಟೆ ಮತ್ತು ಪಕ್ಕೆಗೆ ಚುಚ್ಚಿದ್ದರು. ಗೋಪಿ, ಲೋಹಿತ್, ಪ್ರಜ್ವಲ್ ಮತ್ತು ರಾಜು ಎಂಬುವವರಿಗೆ ದೊಣ್ಣೆಯಿಂದ ಹೊಡೆದಿದ್ದರು. ಘಟನೆ ಸಂಬಂಧ ನವೀನ್ ಎಂಬಾತ ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡುರಾತ್ರಿ ಚೆಕ್‌ಪೋಸ್ಟ್‌ ಬಳಿ ಕಾರು ಬಿಟ್ಟು ಇಬ್ಬರು ಎಸ್ಕೇಪ್, ಡೋರ್ ತೆಗೆದ ಪೊಲೀಸರಿಗೆ ಶಾಕ್

ಕಠಿಣ ಜೈಲು ಶಿಕ್ಷೆ

ತನಿಖೆ ನಡೆಸಿದ ತುಂಗಾ ನಗರ ಠಾಣೆಯ ಹಿಂದಿನ ಸಬ್ ಇನ್ಸ್‍ಪೆಕ್ಟರ್‍ ಬಿ.ಸಿ.ಗಿರೀಶ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಮಾನು ಅವರು ವಿಚಾರಣೆ ನಡೆಸಿದರು. ಆರೋಪ ಸಾಬೀತಾದ ಹಿನ್ನೆಲೆ ಕೊರಮರ ಕೇರಿಯ ವಿಜಯ್ ಕುಮಾರ್, ಪ್ರವೀಣ್, ನವೀನ್, ಚೇತನ್ ಮತ್ತು ಸಂತೋಷ್ಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 65 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದರೆ 3 ತಿಂಗಳು ಸಾದಾ ಜೈಲು (Jail) ಶಿಕ್ಷೆ ವಿಧಿಸಲು ಆದೇಶಿಸಲಾಗಿದೆ.

ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Creative Gift Ripponpete

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 7, 2023

Leave a Comment