ದುರ್ಗಿಗುಡಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ರಾತ್ರೋರಾತ್ರಿ ನಾಪತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 APRIL 2023

SHIMOGA : ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike Theft). ದುರ್ಗಿಗುಡಿಯಲ್ಲಿ ಘಟನೆ ಸಂಭವಿಸಿದೆ. ಪಾರ್ಕ್ ಬಡಾವಣೆಯ ರಘುನಂದನ್ ಎಂಬುವವರಿಗೆ ಸೇರಿದ ಸ್ಟಾರ್ ಸಿಟಿ ಬೈಕ್ ಕಳ್ಳತನವಾಗಿದೆ. ಮಾ.27ರಂದು ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಮನೆಯಿಂದ ಹೊರ ಬಂದು ನೋಡಿದಾಗ ಬೈಕ್ ಇರಲಿಲ್ಲ.

ಎಲ್ಲೆಡೆ ಹುಡುಕಾಡಿದ ರಘುನಂದನ್ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಉಪನ್ಯಾಸಕಿಗೆ ಬಂತು ಫೋನ್ ಕರೆ, 24 ಗಂಟೆಯಲ್ಲಿ ಬ್ಲಾಕ್ ಆಗಲಿದೆ ಎಂದು ಎಚ್ಚರಿಕೆ, ನಂಬಿಸಿ ವಂಚನೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 9, 2023

Leave a Comment