ತುಂಗಾ ನದಿ ಹಳೆ ಸೇತುವೆಯಿಂದ ಯುವಕನನ್ನು ದಬ್ಬಿದ ಬೈಕ್ ಸವಾರ, ಗಂಭೀರ ಗಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 APRIL 2023

SHIMOGA : ತುಂಗಾ ನದಿ (Bridge) ಹಳೆ ಸೇತುವೆಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಆತನನ್ನು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ವೇಳೆ ಜಗಳವಾಗಿ ನೂಕಾಟ, ತಳ್ಳಾಟದ ವೇಳೆ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Youth-pushed-from-tunga-bridge-over-an-altercation

ಸೇತುವೆ ಮೇಲೆ ಅಪಘಾತ

ಹಳೆ ಸೇತುವೆ (Bridge) ಮೇಲೆ ಓಮ್ನಿ ಕಾರು ಮತ್ತು ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಮತ್ತು ಕಾರು ಚಾಲಕನ ನಡುವೆ ಜಗಳವಾಗಿದ್ದು, ನೂಕಾಟ, ತಳ್ಳಾಟವಾಗಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಕಾರು ಚಾಲಕ ಆಯಾತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ – ಶಿವಮೊಗ್ಗದ ಹೊಳೆ ಬಸ್‌ ಸ್ಟಾಪ್‌ ಬಳಿ ದಿಢೀರ್‌ ಪ್ರತಿಭಟನೆ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಇದನ್ನು ಗಮನಿಸಿದ ಸಾರ್ವಜನಿಕರು ಮತ್ತು ಪೊಲೀಸರು ಕೂಡಲೆ ಸೇತುವೆ ಕೆಳಗೆ ಹೋಗಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಸೇತುವೆಯಿಂದ ಕೆಳಗೆ ಬಿದ್ದ ವ್ಯಕ್ತಿಯ ಹೆಸರು ದೇವರಾಜ್ ಎಂದು ಹೇಳಲಾಗುತ್ತಿದ್ದು, ಗಂಭೀರ ಗಾಯವಾಗಿದೆ. ಕೂಡಲೆ ಆಂಬುಲೆನ್ಸ್ ಮೂಲಕ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 12, 2023

Leave a Comment