ಮಾಲೀಕನ ಮನೆಗೆ ಊಟಕ್ಕೆ ಹೋಗಿದ್ದ ಕೆಲಸಗಾರನ ಮೇಲೆ ದಾಳಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 APRIL 2023

SHIMOGA : ರಂಜಾನ್ ಹಬ್ಬದ ಪ್ರಯುಕ್ತ ಮಾಲೀಕರ ಮನೆಯಲ್ಲಿ ಊಟಕ್ಕೆ (Dinner) ತೆರಳಿದ್ದ ಕೆಲಸಗಾರನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

crime name image

ಮಿಳಘಟ್ಟದ ಮೊಹಮದ್ ತಾಂಜಿಮ್ ಎಂಬುವವರು ಆರ್‍ಎಂಎಲ್‍ ನಗರದಲ್ಲಿರುವ ತನ್ನ ಮಾಲೀಕರ ಮನೆಗೆ ಊಟಕ್ಕೆ (Dinner) ತೆರಳಿದ್ದರು. ರಸ್ತೆಯಲ್ಲಿ ಅಡ್ಡಗಟ್ಟಿದ್ದ ನಿಹಾಲ್, ವಾದು, ಫೈಜಲ್ ಸೇರಿದಂತೆ ಹಲವರು, ಮೊಹಮದ್ ತಾಂಜಿಮ್‍ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿಂದ ಮೊಹಮದ್ ತಾಂಜಿಮ್ ಅವರು ಮಾಲೀಕರ ಮನೆಗೆ ತೆರಳಿದ್ದರು. ಆಗ ನಿಹಾಲ್ ಸೇರಿದಂತೆ ಹತ್ತು ಮಂದಿ ಏಕಾಏಕಿ ಮನಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಅಡ್ಡಗಟ್ಟಿ ಕತ್ತು ಹಿಸುಕಲು ಯತ್ನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment