ಶಿವಮೊಗ್ಗದಲ್ಲಿ ಜೆಡಿಎಸ್‌ನಿಂದಲೂ ʼಅಚ್ಚರಿ ಅಭ್ಯರ್ಥಿʼ, ತೆನೆ ಹೊರುತ್ತಾರಾ ಪ್ರಸನ್ನ ಕುಮಾರ್?

SHIVAMOGGA LIVE NEWS | 18 APRIL 2023

SHIMOGA : ಬಿಜೆಪಿ ಟಿಕೆಟ್‌ ಕುರಿತ ಚರ್ಚೆ ಮಧ್ಯೆ ಈಗ ಶಿವಮೊಗ್ಗ ಜೆಡಿಎಸ್‌ ಪಕ್ಷದ ಟಿಕೆಟ್‌ ವಿಚಾರ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ (JDS Candidate) ಎಂದು ಚರ್ಚೆಯಾಗುತ್ತಿದೆ.

JDS-Party-Office-Shimoga

ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಕೈ ತಪ್ಪಿದ್ದರಿಂದ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದರು. ಅಶೋಕನಗರದಲ್ಲಿರುವ ಪ್ರಸನ್ನ ಕುಮಾರ್‌ ಅವರ ಮನೆ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅವರ ಹೆಸರು ಜೆಡಿಎಸ್‌ ಪಾಳಯದಲ್ಲಿ ಕೇಳಿ ಬಂದಿದೆ.

ಸುದ್ದಿಗೋಷ್ಠಿ, ಸಭೆಗೆ ಗೈರಾದ ಕೆಬಿಪಿ

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಇವತ್ತು ವಿವಿಧ ಘಟಕಗಳ ಅ‍ಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಸಲಾಯಿತು. ಇದಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಸಭೆಗೆ ಪ್ರಸನ್ನ ಕುಮಾರ್‌ ಅವರು ಗೈರಾಗಿದ್ದರು. ಈ ಬಗ್ಗೆ ಜಿಲ್ಲಾಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ಅವರನ್ನು ಪ್ರಶ್ನಿಸಿದಾಗ, ʼಪ್ರಸನ್ನ ಕುಮಾರ್‌ ಅವರು ಇನ್ನೇನು ಸಭೆಗೆ ಬರುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ಮಾತನಾಡುತ್ತೇವೆʼ ಎಂದರು.

KB-Prasanna-Kumar-about-Shimoga-Clash

ಅಭ್ಯರ್ಥಿ ಕುರಿತು ಮೂಡದ ಸ್ಪಷ್ಟತೆ

ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಅವರೆ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ. ಅವರ ಬದಲು ಜೆಡಿಎಸ್‌ನಿಂದ ಅಚ್ಚರಿ ಅಭ್ಯರ್ಥಿಯನ್ನು (JDS Candidate) ಅಖಾಡಕ್ಕಿಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Kalleshwara-Enterprises.webp

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಶ್ರೀಕಾಂತ್‌ ಅವರು, ಇಂದು ಸಂಜೆಯೊಳಗೆ ಅಭ್ಯರ್ಥಿ ಕುರಿತು ಸ್ಪಷ್ಟತೆ ಸಿಗಲಿದೆ. ಕುಮಾರಸ್ವಾಮಿ ಅವರು ಸಂಜೆ ವೇಳೆಗೆ ಅಭ್ಯರ್ಥಿ ಘೋಷಿಸಲಿದ್ದಾರೆʼ ಎಂದು ತಿಳಿಸಿದರು.

ಇದನ್ನೂ ಓದಿ – ಟಿಕೆಟ್ ಘೋಷಣೆ ಮೊದಲು ಒಗ್ಗಟ್ಟು, ಈಗ ಹೊಸ ಬಿಕ್ಕಟ್ಟು, ಏನಾಗ್ತಿದೆ ಶಿವಮೊಗ್ಗ ಕಾಂಗ್ರೆಸ್‌ನಲ್ಲಿ?

ಕಾಂಗ್ರೆಸ್‌ ಪಕ್ಷ ಹೆಚ್‌.ಸಿ.ಯೋಗೇಶ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಬಿಜೆಪಿ ಇನ್ನಷ್ಟೆ ಅಭ್ಯರ್ಥಿ ಪ್ರಕಟಿಸಬೇಕಿದೆ. ಈಗ ಜೆಡಿಎಸ್‌ ಕೂಡ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಕ್ಷೇತ್ರದ ಮತದಾರರಲ್ಲಿ ಕುತೂಹಲ ಹೆಚ್ಚಿಸಿದೆ.

shivamogga live news whatsappa number

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment