ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ನಿವೃತ್ತ ಅರಣ್ಯಾಧಿಕಾರಿ, ಹಿಂದಿನ ತಹಶೀಲ್ದಾರ್‌ ಸಂಬಂಧಿ ಮನೆಯಲ್ಲಿ ಶೋಧ

SHIVAMOGGA LIVE NEWS | 24 APRIL 2023

SHIMOGA : ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayuktha Raid) ನಡೆಸಿದ್ದಾರೆ. ಶಿವಮೊಗ್ಗದಲ್ಲಿಯು ನಿವೃತ್ತ ಅರಣ್ಯಾಧಿಕಾರಿ ಮತ್ತು ಶಿವಮೊಗ್ಗದ ಹಿಂದಿನ ತಹಶೀಲ್ದಾರ್‌ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Shivamogga-Live-Number-1-Website

Lokayuktha-Raid-on-Retired-Forest-Officer-House

ಅರಣ್ಯಾಧಿಕಾರಿ ಮನೆ ಮೇಲೆ ದಾಳಿ

ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್‌ಓ ಆಗಿದ್ದ ಐ.ಎಂ.ನಾಗರಾಜ್‌ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayuktha Raid) ಮಾಡಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಡಿಸೆಂಬರ್‌ 31ರಂದು ಐ.ಎಂ.ನಾಗರಾಜ್‌ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಕೆಲವು ದಿನದ ಹಿಂದಷ್ಟೆ ಬಿಜೆಪಿ ಸೇರ್ಪಡೆಯಾಗಿದ್ದರು.

Nammur-News-Whatsapp

ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿಯು ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಹಶೀಲ್ದಾರ್‌ ಸಂಬಂಧಿ ಮನೆಯಲ್ಲಿ ಶೋಧ

ಇನ್ನು, ಶಿವಮೊಗ್ಗದ ಹಿಂದಿನ ತಹಶೀಲ್ದಾರ್‌ ನಾಗರಾಜ್‌ ಅವರ ಮನೆ ಮೇಲೆಯೂ ಲೋಕಾಯುಕ್ತ ದಾಳಿಯಾಗಿದೆ. ಚುನಾವಣೆಗು ಮೊದಲು ನಾಗರಾಜ್‌ ಅವರನ್ನು ಶಿವಮೊಗ್ಗದಿಂದ ವರ್ಗಾಯಿಸಲಾಗಿತ್ತು. ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಹಶೀಲ್ದಾರ್‌ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಶಿಕಾರಿಪುರದಲ್ಲಿರುವ ನಾಗರಾಜ್‌ ಅವರ ಸಂಬಂಧಿಯ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಜೈಲಿನ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಕುಟುಂಬದವರ ಅನುಮಾನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 24, 2023

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

Hulikal Ghat Closed for Traffic Following Landslide; Alternate Routes Announced

Hulikal Ghat Closed for Traffic Following Landslide; Alternate Routes Announced

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

Leave a Comment