ಶಿವಮೊಗ್ಗದ ಪ್ರಮುಖ ರಸ್ತೆಗಳು ಬಂದ್‌, ಎಲ್ಲೆಲ್ಲೂ ಬ್ಯಾರಿಕೇಡ್‌, ಭದ್ರತಾ ಸಿಬ್ಬಂದಿ ನಿಯೋಜನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 MAY 2023

SHIMOGA : ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ ಅವರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ರೋಡ್‌ ಶೋ (Road Show) ನಡೆಯಲಿದೆ. ಈ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದೆ.

Barricade-in-Shimoga-Jail-road-ahead-of-Amith-Shah-visit

ಎಲ್ಲಿಂದ ಎಲ್ಲಿವರೆಗೆ ರೋಡ್‌ ಶೋ?

ನಗರದ ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಅಮಿತ್‌ ಷಾ ಅವರ ರೋಡ್‌ ಶೋ ಆರಂಭವಾಗಲಿದೆ. ಅಮೀರ್‌ ಅಹಮದ್‌ ಸರ್ಕಲ್‌, ನೆಹರು ರಸ್ತೆ, ಗೋಪಿ ಸರ್ಕಲ್‌, ದುರ್ಗಿಗುಡಿ ರಸ್ತೆ, ಜೈಲ್‌ ಸರ್ಕಲ್‌, ಜೈಲ್‌ ರಸ್ತೆ ಮೂಲಕ ಲಕ್ಷ್ಮೀ ಟಾಕೀಸ್‌ ಬಳಿ ತಲುಪಲಿದೆ.

shivamogga live news whatsappa number

ಮಧ್ಯಾಹ್ನದಿಂದಲೇ ರಸ್ತೆಗಳು ಬಂದ್‌

ರೋಡ್‌ ಶೋ (Road Show) ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಎಲ್ಲಾ ರಸ್ತೆಗಳಲ್ಲಿಯೂ ಬ್ಯಾರಿಕೇಡ್‌ ಹಾಕಲಾಗಿದೆ. ವಾಹನಗಳ ಸಂಚಾರಕ್ಕೆ ನಿರ್ಬಂರ್ಧಿಸಲಾಗಿದೆ. ರಸ್ತೆಯಲ್ಲಿ ಪೊಲೀಸ್‌ ಸಿಬ್ಬಂದಿ ಮತ್ತು ಸಿಐಎಸ್‌ಎಫ್‌ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ವಾಹನ ಸವಾರರಿಗೆ ಕಿರಿಕಿರಿ, ಅಂಗಡಿಗಳು ಬಂದ್‌

ರಸ್ತೆಗಳನ್ನು ಬಂದ್‌ ಮಾಡಿದ್ದರಿಂದ ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳುವುದಕ್ಕೆ ಸಮಸ್ಯೆಯಾಗಿದೆ. ಕೆಲವು ಕಡೆ ಪೊಲೀಸರ ಜೊತೆ ಜನರು ವಾಗ್ವಾದವನ್ನು ನಡೆಸುತ್ತಿದ್ದಾರೆ. ಇನ್ನು, ರಸ್ತೆಗಳು ಬಂದ್‌ ಮಾಡಿದ್ದರಿಂದ ಅಂಗಡಿ ಮಾಲೀಕರಿಗೆ ಸಮಸ್ಯೆ ಉಂಟಾಗಿದೆ. ಸಂಜೆ 7 ಗಂಟೆವರೆಗೆ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ಅಲ್ಲಿವರೆಗೂ ಗ್ರಾಹಕರು ಅಂಗಡಿಗಳತ್ತ ಬರುವುದು ಕಷ್ಟ ಎಂದು ಮಾಲೀಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನ, ಸಂಸದ ರಾಘವೇಂದ್ರ ಹೇಳಿದ್ದೇನು? ಯಾವಾಗ ಶುರುವಾಗುತ್ತೆ ಹಾರಾಟ?

ಮತ್ತೊಂದೆಡೆ ರೋಡ್‌ ಶೋನಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಅವರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಫ್ರೀಡಂ ಪಾರ್ಕ್‌, ಎನ್‌ಇಎಸ್‌ ಮೈದಾನ, ಸೈನ್ಸ್‌ ಕಾಲೇಜು ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 1, 2023

Leave a Comment