ಈ ಬಾರಿ ನೈಋತ್ಯ ಮುಂಗಾರು ಸ್ವಲ್ಪ ವಿಳಂಬ, 2 ಕಾರಣ ತಿಳಿಸಿದ ಹವಾಮಾನ ಇಲಾಖೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 MAY 2023

BENGALURU : ನೈಋತ್ಯ ಮುಂಗಾರು (Monsoon) ಈ ಬಾರಿ ಸ್ವಲ್ಪ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳನ್ನು ಕೂಡ ಗುರುತಿಸಿದೆ.

Rain-in-Shivamogga-City

ವಾಡಿಕೆಯಂತೆ ಜೂ.1ರಿಂದ ನೈಋತ್ಯ ಮುಂಗಾರು (Monsoon) ಕೇರಳವನ್ನು ಪ್ರವೇಶಿಸಿ ಕ್ರಮೇಣ ಕರ್ನಾಟಕದ ಮೂಲಕ ಬೇರೆ ರಾಜ್ಯಗಳತ್ತ ಸಾಗುತ್ತದೆ. ಆದರೆ ಈ ಬಾರಿ ಜೂ. 4 ಅಥವಾ 5ರಂದು ನೈಋತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ – ರೈಲು ಡಿಕ್ಕಿಯಾಗಿ ಹಳಿ ಪಕ್ಕದ ಚರಂಡಿಯಲ್ಲಿ ಸಿಲುಕಿದ ಕಾಡು ಕೋಣ

ತಡವಾಗಲು ಎರಡು ಕಾರಣ

1 ಪ್ರಸ್ತುತ ವಾತಾವರಣ ತುಂಬಾ ಬಿಸಿ ಇದೆ. ಇದರಿಂದ ಮಳೆಯ ಮಾರುತವಾಗಿ ಪರಿವರ್ತನೆಯಾಗಲು ಕೆಲವು ದಿನಗಳು ಬೇಕಾಗುತ್ತವೆ.

2  ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ಕರಾವಳಿಗೆ ಅಪ್ಪಳಿಸಿದ ಚಂಡಮಾರುತವು ಮುಂಗಾರಿನ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment