ಸ್ನೇಹಿತನಿಗೆ ಕೊಟ್ಟಿದ್ದ RX 100 ಬೈಕ್‌ ನಾಪತ್ತೆ, ನಾಲ್ಕು ತಿಂಗಳ ಬಳಿಕ ದೂರು, ಏನಿದು ಕೇಸ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 MAY 2023

SHIMOGA : ಯಮಹಾ ಆರ್‌.ಎಕ್ಸ್‌ 100 ಬೈಕ್‌ ಕಳ್ಳತನವಾಗಿದ್ದು (Bike Missing), ನಾಲ್ಕು ತಿಂಗಳು ತಡವಾಗಿ ಮಾಲೀಕ ದೂರು ನೀಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

bike theft reference image

ವಿನೋಬನಗರ ಮೇಧಾರ ಕೇರಿಯ ಶ್ರೀಕಾಂತ ಎಂಬಾತ ಆರ್‌.ಎಕ್ಸ್‌ 100 ಬೈಕ್‌ ಖರೀದಿಸಿದ್ದ. ಆತನ ಸ್ನೇಹಿತ ಪ್ರದೀಪ್‌ ಕೆಲಸದ ನಿಮಿತ್ತ ಎರಡು ದಿನ ಬೈಕ್‌ ಬೇಕು ಎಂದು ಪಡೆದುಕೊಂಡಿದ್ದ. ಜ.9ರಂದು ಪ್ರದೀಪ, ವೆಂಕಟೇಶನಗರದ ತನ್ನ ಮನೆ ಬಳಿ ರಾತ್ರಿ ಬೈಕ್‌ ನಿಲ್ಲಿಸಿದ್ದ. ಬೆಳಗಾಗುವುದರಲ್ಲಿ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದರು ಬೈಕ್‌ (Bike Missing) ಸಿಕ್ಕಿರಲಿಲ್ಲ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸೈಟ್‌ ಖರೀದಿಸುವ ಮುನ್ನ ಹುಷಾರ್‌, ಯಾರದ್ದೋ ಸೈಟ್‌ ಮತ್ಯಾರಿಗೋ ಮಾರಲು ಯತ್ನ

ನಾಲ್ಕು ತಿಂಗಳು ತಡವಾಗಿ ದೂರು

ಆರ್.ಎಕ್ಸ್‌ 100 ಬೈಕ್‌ ‍ಖರೀದಿಸಿದ್ದರೂ ಶ್ರೀಕಾಂತನ ಹೆಸರಿಗೆ ದಾಖಲೆಗಳು ವರ್ಗಾವಣೆಯಾಗಿರಲಿಲ್ಲ. ಆರ್‌.ಟಿ.ಒ ಕಚೇರಿಯಲ್ಲಿ ದಾಖಲೆಗಳನ್ನು ವರ್ಗಾಯಿಸಿಕೊಂಡ ಬಳಿಕ ಬೈಕ್‌ ಕಳ್ಳತನ ಕುರಿತು ದೂರು ನೀಡಿದ್ದಾನೆ. ಬೈಕ್‌ ಕಳ್ಳತನವಾಗಿ ನಾಲ್ಕು ತಿಂಗಳ ಬಳಿಕ ಜಯನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ‌

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 21, 2023

Leave a Comment