ʼಮಂತ್ರಿ ಆಗ್ತಾರೆ ಅಂತಾ ಜನ ಮತ ನೀಡಿದ್ದಾರೆ, ಕೈ ತಪ್ಪಿದರೆ ಹೋರಾಟಕ್ಕೆ ಸಿದ್ಧವಾಗಲಿದೆ ರೂಪುರೇಷೆʼ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 MAY 2023

SHIMOGA : ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್‌ ಅವರಿಗೆ ಸಚಿವ ಸ್ಥಾನ (Minister Post) ನೀಡಬೇಕು. ಈ ಸಂಬಂಧ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಲು ತಾವು ಸಿದ್ಧ. ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಭದ್ರಾವತಿಯ ಕಾಂಗ್ರೆಸ್‌ ಮುಖಂಡರು, ಸಂಗಮೇಶ್ವರ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಬಲಿಗರು, ಈತನಕ ಕ್ಷೇತ್ರದ ಶಾಸಕರಾರೂ ಮಂತ್ರಿಯಾಗಿಲ್ಲ. ಈ ಬಾರಿ ಸಂಗಮೇಶ್ವರ ಅವರಿಗೆ ಸಚಿವರಾಗುವ ಅವಕಾಶವಿದೆ. ಹೈಕಮಾಂಡ್‌ ಸಚಿವ ಸ್ಥಾನ (Minister Post) ನೀಡಬೇಕು ಎಂದು ಆಗ್ರಹಿಸಿದರು.

ಮಂತ್ರಿಯಾಗುವ ಭರವಸೆಯಲ್ಲಿ ಮತ ನೀಡಿದ್ದಾರೆ

BDVT%20SHADAKSHARIಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಷಡಾಕ್ಷರಿ ಮಾತನಾಡಿ, ಸಂಗಮೇಶ್ವರ ಅವರು ನಾಲ್ಕನೆ ಬಾರಿ ಶಾಸಕರಾಗಿದ್ದಾರೆ. ಪಕ್ಷದಲ್ಲಿ ಸೀನಿಯರ್‌ ಶಾಸಕರು. ಸಿದ್ದರಾಮಯ್ಯ ಅವರ ಸಂಗಮೇಶ್ವರ ಅವರನ್ನು ಗೆಲ್ಲಿಸಿ ಕಳುಹಿಸಿ. ಮಂತ್ರಿ ಮಾಡುವ ಜವಾಬ್ದಾರಿ ತಮ್ಮದು ಎಂದು ಹೇಳಿದ್ದರು. ಅದರಂತೆ ಸಂಗಮೇಶ್ವರ ಅವರು ಸಚಿವರಾಗುತ್ತಾರೆ ಎಂಬ ಭರವಸೆಯಲ್ಲಿ ಜನ ಮತ ನೀಡಿದ್ದಾರೆ. ತಾಲೂಕು, ಜಿಲ್ಲಾ ಪಂಚಾಯಿತಿ, ಎಂ.ಪಿ. ಚುನಾವಣೆಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಾಗ್ತಾರೆ ಮಿನಿಸ್ಟರ್?

ಸಚಿವ ಸ್ಥಾನ ಕೈತಪ್ಪಿದರೆ ಹೋರಾಟ

BDVT%20MANISHEKARಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್‌ ಮಾತನಾಡಿ, ಬೇರೆಯವರ ಅಧಿಕಾರಿ ಕಸಿದು ನಮಗೆ ಸಚಿವ ಸ್ಥಾನ ನೀಡುವಂತೆ ನಾವು ಕೇಳುತ್ತಿಲ್ಲ. ಸಂಗಮೇಶ್ವರ ಅವರು ಜಿಲ್ಲೆಯ ಅನುಭವಿ ರಾಜಕಾರಣಿ. ಅಲ್ಲದೆ ನಮ್ಮ ಕ್ಷೇತ್ರಕ್ಕೆ ಅವಕಾಶ ಕೊಡಿ ಎಂದಷ್ಟೆ ಕೇಳುತ್ತಿದ್ದೇನೆ. ಈ ಹಿನ್ನೆಲೆ ಅಧಿವೇಶನ ಮುಗಿದ ಮೇಲೆ ಹೈಕಮಾಂಡ್‌ ಭೇಟಿ ಮಾಡಲಿದ್ದೇವೆ. ಸಂಗಮೇಶ್ವರ ಅವರು ಸಚಿವರಾದರೆ ಎಂಪಿಎಂ ಪುನಾರಂಭವಾಗಲಿದೆ. ವಿಐಎಸ್‌ಎಲ್‌ ಕಾರ್ಖಾನೆಗು ಅನುಕೂವಲಾಗಲಿದೆ. ಒಂದು ವೇಳೆ ಸಚಿವ ಸ್ಥಾನ ತಪ್ಪಿದರೆ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ – ಶಿವಮೊಗ್ಗಕ್ಕೆ ಸಿಗಲಿಲ್ಲ ಮೊದಲ ಪ್ರಾಶಸ್ತ್ಯ, ಮುನಿಸಿಕೊಂಡರಾ ಶಾಸಕ ಮಧು ಬಂಗಾರಪ್ಪ?

ಆರು ತಿಂಗಳಲ್ಲಿ ಎಂಪಿಎಂ ಪುನಾರಂಭ

BDVT%20RAVIKUMARಕಾಂಗ್ರೆಸ್‌ ನಾಯಕ ರವಿಕುಮಾರ್‌ ಮಾತನಾಡಿ, ಈ ಬಾರಿ ಮಂತ್ರಿಗೆ ಮತ ನೀಡಿ ಎಂದು ಮತಯಾಚನೆ ಮಾಡಿದ್ದೇವೆ. ಸಂಗಮೇಶ್ವರ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಆರು ತಿಂಗಳಲ್ಲಿ ಎಂಪಿಎಂ ಪುನಾರಂಭ ಮಾಡಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಕ್ಷೇತ್ರದ ಶಾಸಕರು ಸಚಿವರಾಗಿದ್ದಾರೆ. ಆದರೆ ಭದ್ರಾವತಿ ಕ್ಷೇತ್ರದಲ್ಲಿ ಈತನಕ ಯಾರೊಬ್ಬರಿಗು ಸಚಿವ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಈ ಬಾರಿ ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.

SHIVAMOGGA LIVE NITIN KAIDOTLU QUOTE jpg

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment