ಶಿವಮೊಗ್ಗ – ಭದ್ರಾವತಿ ಮಧ್ಯೆ ಚಲಿಸುವಾಗಲೆ ಬೇರೆ ಬೇರೆಯಾದ ಇಂಟರ್‌ಸಿಟಿ ರೈಲಿನ ಇಂಜಿನ್‌, ಬೋಗಿಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 MAY 2023

SHIMOGA : ಚಲಿಸುತ್ತಿದ್ದ ರೈಲಿನ ಇಂಜಿನ್‌ ಮತ್ತು ಬೋಗಿಗಳು ಬೇರ್ಪಟ್ಟಿವೆ. ಘಟನೆಯಿಂದಾಗಿ ಪ್ರಯಾಣಿಕರು ಆತಂಕ ಮತ್ತು ಗೊಂದಲಕ್ಕೀಡಾದರು. ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲಿನಲ್ಲಿ (Intercity Rail) ಘಟನೆ ಸಂಭವಿಸಿದೆ.

Railway-Engine-Boggie-Dislocated-enroute-to-Bengaluru-from-Shimoga-at-Bidare.

ಶಿವಮೊಗ್ಗ – ಭದ್ರಾವತಿ (Intercity Rail) ಮಧ್ಯೆ ಘಟನೆ ಸಂಭವಿಸಿದೆ. ಬಿಳಕಿ ಬಳಿ ರೈಲಿನ ಇಂಜಿನ್‌ ಮತ್ತು ಬೋಗಿಗಳು ಬೇರ್ಪಟ್ಟಿವೆ. ಪ್ರತ್ಯೇಕಗೊಂಡ ಇಂಜಿನ್‌, ಎಲ್ಲಾ ಬೋಗಿಗಳನ್ನು ಹಿಂದೆ ಬಿಟ್ಟು ಸುಮಾರು 100 ಮೀಟರ್‌ ಮುಂದೆ ಹೋಗಿತ್ತು. ಲೋಕೋ ಪೈಲೆಟ್‌ ಕೂಡಲೆ ಇಂಜಿನ್‌ ನಿಲ್ಲಿಸಿದ್ದಾರೆ. ದಿಢೀರ್‌ ರೈಲು ನಿಂತಿದ್ದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ.

ಶಿವಮೊಗ್ಗದಿಂದ ಸಿಬ್ಬಂದಿ ದೌಡು

ಇಂಜಿನ್‌, ಬೋಗಿಗಳು ಬೇಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಇಂಜಿನ್‌ ಮತ್ತು ಬೋಗಿಗಳನ್ನು ಪುನಃ ಜೋಡಣೆ ಮಾಡಿ ಭದ್ರಾವತಿ ನಿಲ್ದಾಣಕ್ಕೆ ಕಳುಹಿಸಿದರು. ರೈಲಿನಲ್ಲಿನ ತಾಂತ್ರಿಕ ದೋಷವನ್ನು ಪರಿಶೀಲಿಸಿ ಸರಿಪಡಿಸಿದರು. ಇದರಿಂದ ರೈಲು ವಿಳಂಬವಾಗಿ ಬೆಂಗಳೂರಿಗೆ ಸಂಚರಿಸಿತು.

ಇದನ್ನೂ ಓದಿ – ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಅಪಘಾತ, ರಸ್ತೆ ಪಕ್ಕದ ರೇಲಿಂಗ್‌ ಹತ್ತಿ ನಿಂತ ಕಾರು, ಹೇಗಾಯ್ತು ಘಟನೆ?

ಸಾಮಾನ್ಯವಾಗಿ ಇಂಜಿನ್‌ ಮತ್ತು ಬೋಗಿಗಳು ಬೇರ್ಪಡುವುದಿಲ್ಲ. ಆದರೆ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment