ಶಿವಮೊಗ್ಗ ವಿಮಾನ ನಿಲ್ದಾಣ, ಪ್ರಧಾನಿ ಮೋದಿಯನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ ನೆಟ್ಟಿಗರು, ಏನೇನು ಪ್ರಶ್ನೆ ಕೇಳಿದ್ದಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 28 MAY 2023

SHIMOGA : ಉದ್ಘಾಟನೆಯಾಗಿ ಮೂರು ತಿಂಗಳಾದರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ (Flight) ಆರಂಭಾಗದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್‌ ಮಾಡಿ ಹಲವರು ಪ್ರಶ್ನೆ ಕೇಳಿದ್ದಾರೆ.

PM-Modi-to-inaugurate-Shivamogga-Airport

ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಈ ಕುರಿತು ಮೊದಲು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಎತ್ತಿದ್ದಾರೆ. ಇದರ ಬೆನ್ನಿಗೆ ಹಲವರು ಇದೆ ಮಾದರಿಯ ಪ್ರಶ್ನೆಗಳನ್ನು ಕೇಳಿ ಟ್ವೀಟ್‌ ಮಾಡಿದ್ದಾರೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು.

ಯಾರೆಲ್ಲ ಏನೇನು ಟ್ವೀಟ್‌ ಮಾಡಿದ್ದಾರೆ?

ವಿಮಾನ ನಿಲ್ದಾಣದ ಈಗಿನ ಅಪ್‌ಡೇಟ್‌ ಏನು?

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೊದಲಿಗೆ ಬೆಂಗಳೂರು – ಶಿವಮೊಗ್ಗ ರೂಟ್‌ನಲ್ಲಿ ವಿಮಾನ (Flight) ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂಡಿಗೋ ಏರ್‌ಲೈನ್ಸ್‌ ವಿಮಾನ ಹಾರಾಟ ಶುರುವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದರು. ಈಗಾಗಲೇ ಇಂಡಿಗೋ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಶಿವಮೊಗ್ಗದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂಟರ್‌ನ್ಯಾಷನಲ್‌ ಏರ್‌ ಟ್ರಾಫಿಕ್‌ ಕೋಡ್‌ ಲಭಿಸಿದೆ. ಇದಾಗಿ ಕೆಲವೆ ತಿಂಗಳಲ್ಲಿ ವಿಮಾನ ಹಾರಾಟ ಶುರುವಾಗಲಿದೆ ಎಂದು ತಿಳಿದು ಬಂದಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಅತ್ಯಾಧುನಿಕ ಫೈರ್‌ ಇಂಜಿನ್‌ ಸೇರಿದಂತೆ ಹಲವು ಮಹತ್ವದ ಉಪಕರಣಗಳನ್ನು ತರಿಸಲಾಗಿದೆ.

ಇದನ್ನೂ ಓದಿ – ಗುಡ್‌ ನ್ಯೂಸ್‌, ಶಿವಮೊಗ್ಗ – ಬೆಂಗಳೂರು KSRTC ಇ-ಬಸ್‌ ಸೇವೆ ಶುರು, ಹೇಗಿದೆ ಬಸ್? ಟಿಕೆಟ್‌ ರೇಟ್ ಎಷ್ಟಿದೆ?

ಚುನಾವಣೆ ಮುಗಿಯುತ್ತಿದ್ದಂತೆ ವಿಮಾನ ನಿಲ್ದಾಣ ಮತ್ತು ವಿಮಾನ ಹಾರಾಟದ ಕುರಿತು ಜನರಲ್ಲಿ ಪುನಃ ಕುತೂಹಲ ಮೊಳಕೆಯೊಡೆದಿದೆ. ಉದ್ಘಾಟನೆಯಾಗಿ ಮೂರು ತಿಂಗಳು ಕಳೆಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಈ ಕುರಿತು ಪ್ರಶ್ನೆಗಳನ್ನು ಎತ್ತಲು ಆರಂಭಿಸಿದ್ದಾರೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 28, 2023

Leave a Comment