ದಿನ ಭವಿಷ್ಯ | ದಿನಕ್ಕೊಂದು ಪರಿಹಾರ | ಯಾವ್ಯಾವ ರಾಶಿಯವರಿಗೆ ಹೇಗಿದೆ ಈ ದಿನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA-BHAVISHYA

SHIVAMOGGA LIVE | 28 MAY 2023

Meenaಮೇಷ

ಕೋಪದ ಕೈಗೆ ಬುದ್ದಿ ಕೊಡುವುದು ಒಳ್ಳೆಯದಲ್ಲ. ಸ್ನೇಹಿತರೊಂದಿಗೆ ವಿರಸ ಸಾಧ್ಯತೆ. ಅನಗತ್ಯ ಸಮಯ ವ್ಯರ್ಥವಾಗಲಿದೆ. ಸಂಗಾತಿಯ ಅನಾರೋಗ್ಯದಿಂದ ಖರ್ಚು ಹೆಚ್ಚಲಿದೆ.

Vrushabaವೃಷಭ

ವ್ಯರ್ಥ ಆಲೋಚನೆಗಳು ನಿಮ್ಮ ಮನಸನ್ನು ಆವರಿಸಲಿದೆ. ಕುಟುಂಬದಲ್ಲಿ ವಿರಸ. ಉದ್ಯೋಗ ಸ್ಥಳದಲ್ಲಿ ಅನಗತ್ಯ ಕಿರಿಕಿರಿ. ಮೌನ ವಹಿಸುವುದು ಉತ್ತಮ.

Mithunaಮಿಥುನ

ಕೆಲಸದ ಸ್ಥಳದಲ್ಲಿ ಅತ್ಯಂತ ಒತ್ತಡವಿರಲಿದೆ. ಇದರಿಂದ ಮಾನಸಿಕ ಶಾಂತಿ ಕದಡಲಿದೆ. ಮನೆಯಲ್ಲಿ ವಿನಾಕಾರಣ ಅಸಮಾಧಾನ. ಸಂಗಾತಿಯಿಂದ ನೆರವು.

Karkatakaಕರ್ಕಾಟಕ

ಕೆಲಸದ ನಡುವೆ ವಿಶ್ರಾಂತಿ ಲಭಿಸಲಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರೆ ಮನಸಿಗೆ ನೆಮ್ಮದಿ. ಸಂಬಂಧಿಗಳ ಮನೆಗೆ ಭೇಟಿ ನೀಡುತ್ತೀರಿ.

Simhaಸಿಂಹ

ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲಿದೆ. ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೀರಿ. ಸಂತೋಷದಿಂದ ಇರುವಿರಿ. ಸಂಗಾತಿಯೊಂದಿಗೆ ನೆಮ್ಮದಿ.

Kanyaಕನ್ಯಾ

ಸ್ವಲ್ಪ ಪ್ರಮಾಣದ ಸಾಲ ತೀರಲಿದೆ. ಅವಕಾಶಗಳನ್ನು ಕೈ ಚೆಲ್ಲುತ್ತೀರಿ. ಅನೇಕರಿಂದ ಟೀಕೆ ಎದುರಿಸಬೇಕಾಗುತ್ತದೆ. ಮಾತಿನಲ್ಲಿ ನೈಜತೆ ಇರಲಿ.

Thulaತುಲಾ

ಖರ್ಚು, ವೆಚ್ಚದ ಮೇಲೆ ನಿಗಾ ಇರಲಿ. ಹಣದ ಅಪವ್ಯಯ ಆಗಲಿದೆ. ಯಾವುದೋ ಕಾರಣಕ್ಕೆ ಗಾಯಗೊಳ್ಳುವ ಸಾಧ್ಯತೆ ಇದೆ. ದೂರ ಪ್ರಯಾಣ. ನಿಮಗಾಗಿ ಹೆಚ್ಚಿನ ಸಮಯ ಮೀಸಲಿಡಿ.

Vrushikaವೃಶ್ಚಿಕ

ವಾಹನ ಚಾಲನೆ ವೇಳೆ ರಸ್ತೆ ಮೇಲೆ ಹೆಚ್ಚು ಗಮನವಿರಲಿ. ಹಣದ ಹರಿವು ಇರಲಿದೆ. ಇದರಿಂದ ದೊಡ್ಡ ಸಮಸ್ಯೆ ಪರಿಹಾರವಾಗಲಿದೆ. ಸ್ನೇಹಿತರೊಂದಿಗೆ ಸುಸಮಯ ಕಳೆಯುತ್ತೀರಿ.


WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ


Dhanuಧನು

ಮನೆಗೆ ಸಂಬಂಧಿ ಆಗಮನ. ಮಕ್ಕಳ ಸಾಧನೆಯಿಂದ ನಿಮಗೆ ಸಂತೋಷ ಉಂಟಾಗಲಿದೆ. ಕುಟುಂಬದಲ್ಲಿಯು ನೆಮ್ಮದಿ. ಸಂಜೆ ವೇಳೆಗೆ ಸಂಗಾತಿಯೊಂದಿಗೆ ಮುನಿಸು.

Makaraಮಕರ

ಯೋಗ, ಧ್ಯಾನ, ಕ್ರೀಡೆಯ ಮೇಲೆ ಆಸಕ್ತಿ ಮೂಡಲಿದೆ. ನಿಮ್ಮ ಇಷ್ಟದ ಸಂಗೀತವನ್ನು ಕೇಳುವುದರಿಂದ ಮನಸಿಗೆ ನೆಮ್ಮದಿ. ನಿರುದ್ಯೋಗಿಯಾಗಿದ್ದರೆ ಇವತ್ತು ಉದ್ಯೋಗ ದೊರೆಯಲಿದೆ.

Kumbaಕುಂಭ

ಹಣ ಉಳಿತಾಯ ಮತ್ತು ಹೂಡಿಕೆಯತ್ತ ಗಂಭೀರವಾಗಿ ಯೋಚಿಸಿ. ಇದು ದೀರ್ಘಕಾಲದ ಲಾಭ ತರಲಿದೆ. ಸ್ನೇಹಿತರು, ಸಂಗಾತಿಯ ಕಾರಣಕ್ಕೆ ದುಂದುವೆಚ್ಚ ಆಗಬಹುದು. ಮನೆಯಲ್ಲಿ ಸ್ವಲ್ಪ ಕಿರಿಕಿರಿ.

Meenaಮೀನ

ಆಹಾರ ಸೇವನೆ ನಿಯಂತ್ರಣದಲ್ಲಿರಲಿ. ವೈದ್ಯರನ್ನು ಕಾಣುವ ಸಂದರ್ಭ ಎದುರಾಗಲಿದೆ. ಸಣ್ಣಪುಟ್ಟ ಸಮಸ್ಯೆ ಹೊರತು ಇಡೀ ದಿನ ನೆಮ್ಮದಿಯಿಂದ ಇರುತ್ತೀರಿ.


DINAKONDU PARIHARA jpgಅರಿಶಿಣಕ್ಕೆ ಶ್ರೇಷ್ಠ ಸ್ಥಾನವಿದೆ. ಪೂಜಾ ಕೈಂಕರ್ಯದ ಜೊತೆಗೆ ಆಹಾರ ಮತ್ತು ಔಷಧಕ್ಕು ಅರಿಶಿಣ ಬಳಕೆ ಮಾಡುತ್ತೇವೆ. ಅರಿಶಿನ ಪುಡಿಗೆ ಕೊಬ್ಬರಿ ಎಣ್ಣೆ ಬೆರೆಸಿ ಲೇಪನ ಮಾಡಿಕೊಂಡು ಸ್ನಾನ ಮಾಡಬೇಕು. ಇದರಿಂದ ಚರ್ಮ ರೋಗಗಳು ಬಾಧಿಸುವುದಿಲ್ಲ. ಚರ್ಮ ಕಾಂತಿಯುತವಾಗಲಿದೆ.

SHIVAMOGGA-LIVE-NITIN-KAIDOTLU

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment