ಶಿವಮೊಗ್ಗದ ಕಾಲೇಜಿನಲ್ಲಿ ಅಡ್ಮಿಷನ್‌ಗೆ ತಂದೆ ಜೊತೆ ತೆರಳುತ್ತಿದ್ದ ಯುವತಿ ತಲೆ ಮೇಲೆ ಹರಿದ ಲಾರಿ

SHIVAMOGGA LIVE | 30 MAY 2023

SHIMOGA : ಕಾಲೇಜು (College) ಸೇರುವ ಕನಸಿನೊಂದಿಗೆ ತೆರಳುತ್ತಿದ್ದ ಯುವತಿ ಪಾಲಿಗೆ ಅದೇ ಕೊನೆಯ ಸವಾರಿಯಾಯಿತು. ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉನ್ನತ ಸ್ಥಾನದಲ್ಲಿ ನೋಡಬೇಕು ಎಂಬ ಹಂಬಲ ಹೊತ್ತಿದ್ದ ತಂದೆಯ ಕನಸಿಗೆ ಟಿಪ್ಪರ್‌ ಲಾರಿ ಮಣ್ಣೆರಚಿತು. ಪಿಳ್ಳಂಗೆರೆ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದು, ತಂದೆ ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Bike-Tipper-Lorry-mishap-at-pillangere-in-Shimoga-taluk

ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್‌ ಲಾರಿ ಡಿಕ್ಕಿ ಹೊಡದಿದೆ. ಘಟನೆಯಲ್ಲಿ ಅರಕೆರೆ ಗ್ರಾಮದ ಐಶ್ವರ್ಯಾ (16) ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಆಕೆಯ ತಂದೆ ಜಯಪ್ರಕಾಶ್‌ ಗಾಯಗೊಂಡಿದ್ದು, ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೇಗಾಯ್ತು ಅಪಘಾತ?

ಜಯಪ್ರಕಾಶ್‌ ಮತ್ತು ಐಶ್ವರ್ಯ ಅರೆಕರೆ ಗ್ರಾಮದಿಂದ ಶಿವಮೊಗ್ಗಕ್ಕೆ ಸ್ಪ್ಲೆಂಡರ್‌ ಪ್ಲಸ್‌ ಬೈಕಿನಲ್ಲಿ ತೆರಳುತ್ತಿದ್ದರು. ಪಿಳ್ಳಂಗೆರೆ ಗ್ರಾಮದ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್‌ ಲಾರಿ ರಸ್ತೆಯ ಎಡ ಭಾಗದಲ್ಲಿ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕಿನಲ್ಲಿದ್ದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಐಶ್ವರ್ಯಾಳ ತಲೆ ಮೇಲೆ ಲಾರಿ ಟೈರ್‌ ಹತ್ತಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಜಯಪ್ರಕಾಶ್‌ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.

ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ಸಿಡಿಲು ಬಡಿದು ಮಹಿಳೆ ಸಾವು

Kalleshwara-Enterprises.webp

ಕಾಲೇಜು ಸೇರುವ ಕನಸಿನಲ್ಲಿದ್ದಳು

ಎಸ್ಸೆಸ್ಸೆಲ್ಸಿ ಪಾಸಾಗಿದ್ದ ಅರೆಕೆರೆಯ ಐಶ್ವರ್ಯ ಶಿವಮೊಗ್ಗದ ಕಾಲೇಜು (College) ಸೇರುವ ಕನಸಿನಲ್ಲಿದ್ದಳು. ತಂದೆ ಜಯಪ್ರಕಾಶ್‌ ಅವರು ಮಗಳನ್ನು ಶಿವಮೊಗ್ಗದ ಡಿವಿಎಸ್‌ ಕಾಲೇಜಿಗೆ ಸೇರಿಸುವ ನಿರ್ಧಾರ ಮಾಡಿದ್ದರು. ಸೋಮವಾರ ಮಧ್ಯಾಹ್ನ ಡಿವಿಎಸ್‌ ಕಾಲೇಜಿಗೆ ಅಡ್ಮಿಷನ್‌ ಮಾಡಿಸಲು ಬೈಕಿನಲ್ಲಿ ಮಗಳನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment