ಹುಡುಗಿ ವಿಚಾರಕ್ಕೆ ಮಾರಕಾಸ್ತ್ರ ಸಹಿತ ಯುವಕನ ಮನೆಗೆ ನುಗ್ಗಿ ದಾಂಧಲೆ, ಕಿಟಕಿ ಗಾಜು, ತೊಟ್ಟಿಲು ಪೀಸ್‌ ಪೀಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 1 JUNE 2023

SHIMOGA : ಯುವತಿಯೊಬ್ಬಳ ವಿಚಾರವಾಗಿ ಯುವಕನ ಮನೆಗೆ ಮಾರಕಾಸ್ತ್ರ (Lethal Weapon) ಸಹಿತ ನುಗ್ಗಿದ ಗುಂಪೊಂದು ದಾಂಧಲೆ ನಡೆಸಿದೆ. ಮನೆಯಲ್ಲಿರುವ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನವುಲೆಯ ತ್ರಿಮೂರ್ತಿನಗರದ ನಿವಾಸಿ ಧೀಮಂತ್‌ ಎಂಬಾತನ ಮನೆಗೆ ಯುವಕರ ಗುಂಪು ನುಗ್ಗಿ ದಾಂಧಲೆ ಮಾಡಿದೆ.

ಏನಿದು ಪ್ರಕರಣ?

ಧೀಮಂತ್‌ ಎಂಬಾತನ ಸ್ನೇಹಿತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ನವುಲೆಯ ಕೆಲವು ಯುವಕರು ಈ ವಿಚಾರವಾಗಿ ಧೀಮಂತನ ಸ್ನೇಹಿತನೊಂದಿಗೆ ಪದೇ ಪದೇ ಜಗಳವಾಡುತ್ತಿದ್ದರು. ಬೊಮ್ಮನಕಟ್ಟೆಯಲ್ಲಿ ಇದೆ ಯುವತಿಯ ವಿಚಾರವಾಗಿ ಯುವಕರ ಎರಡು ಗುಂಪುಗಳು ಕಿತ್ತಾಡಿಕೊಂಡಿದ್ದವು. ಆಗ ಧೀಮಂತ್‌ ಕೂಡ ಸ್ಥಳದಲ್ಲಿದ್ದ. ಮೇ 28ರಂದು ಸಂಜೆ ಇದೆ ವಿಚಾರಕ್ಕೆ ನವುಲೆ ಬಡಾವಣೆಯ ಕೆಲ ಯುವಕರು ಧೀಮಂತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಚಾಕು, ಲಾಂಗ್‌, ಕಬ್ಬಿಣದ ರಾಡ್‌, ದೊಣ್ಣೆಗಳನ್ನು ಹಿಡಿದುಕೊಂಡು ಬಂದಿದ್ದ ಯುವಕರು, ಧೀಮಂತನ ಹತ್ಯೆಗೆ ಯೋಜಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತೊಟ್ಟಿಲು ಹಾನಿ ಮಾಡಿ ಪರಾರಿ

ಮಾರಕಾಸ್ತ್ರ (Lethal Weapon) ಸಹಿತ ಬಂದಿದ್ದ ಯುವಕರು ಧೀಮಂತನ ಮನೆಯೊಳಗೆ ನುಗ್ಗಿದ್ದರು. ಇವರನ್ನು ಕಂಡು ಧೀಮಂತ್‌ ಕೊಠಡಿಯೊಳಗೆ ನುಗ್ಗಿ ಅವಿತುಕೊಂಡಿದ್ದ. ರೊಚ್ಚಿಗೆದ್ದ ಯುವಕರು ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಧೀಮಂತನ ಅಕ್ಕನ ಮಗುವಿನ ತೊಟ್ಟಿಲನ್ನು ಒಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ಕೇಳಿ ಅಕ್ಕಪಕ್ಕದ ಮನೆಯವರು ಸೇರುತ್ತಿದ್ದಂತೆ ಯುವಕರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ ಮಹಿಳೆಗೆ ಇಂಗ್ಲೆಂಡ್‌ನಿಂದ ಫ್ರೆಂಡ್‌ ರಿಕ್ವೆಸ್ಟ್‌, ಏರ್‌ಪೋರ್ಟ್‌ನಿಂದ ಫೋನ್‌, ಕೊನೆಗೆ ಕಾದಿತ್ತು ಶಾಕ್

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

WATCH VIDEO

[su_button url=”https://admission.parishramaneetacademy.com/smglive/” target=”blank” style=”glass” background=”#0003ab” color=”#ffffff” size=”6″ radius=”0″ icon=”icon: chevron-right”]ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ[/su_button]

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 1, 2023

Leave a Comment