SHIVAMOGGA LIVE | 8 JUNE 2023
SHIMOGA : ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಎರಡನೇ ಅವಧಿಗೆ ಮೀಸಲಾತಿ (Reservation) ನಿಗದಿಗೆ ದಿನಾಂಕ ಪ್ರಕಟಿಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ನಿಗದಿ ಮಾಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕು ಸಭೆ : ಜೂನ್ 19ರಂದು ಬೆಳಗ್ಗೆ 10.30ಕ್ಕೆ ಕುವೆಂಪು ರಂಗಮಂದಿರ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀರ್ಥಹಳ್ಳಿ ತಾಲೂಕು ಸಭೆ : ಜೂನ್ 20ರಂದು ಬೆಳಗ್ಗೆ 10.30ಕ್ಕೆ ಗೋಪಾಲಗೌಡ ರಂಗಮಂದಿರ.
ಹೊಸನಗರ ತಾಲೂಕು ಸಭೆ : ಜೂನ್ 20ರಂದು ಮಧ್ಯಾಹ್ನ 3ಕ್ಕೆ ಹೊಸನಗರ ಐ.ಬಿ.ರಸ್ತೆಯಲ್ಲಿರುವ ವಿದ್ಯಾಸಂಘ ರಂಗಮಂದಿರ.
ಇದನ್ನೂ ಓದಿ – ಶಿವಮೊಗ್ಗ ಜನಶತಾಬ್ದಿ, ಯಶವಂತಪುರ ಎಕ್ಸ್ಪ್ರೆಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್, ರೈಲ್ವೆ ಇಲಾಖೆಯಿಂದ ಆದೇಶ
ಭದ್ರಾವತಿ ತಾಲೂಕು ಸಭೆ : ಜೂ.21ರಂದು ಬೆಳಗ್ಗೆ 10.30ಕ್ಕೆ ಭದ್ರಾವತಿ ವೆಂಕಟೇಶ್ವರ ಚಿತ್ರಮಂದಿರ.
ಶಿಕಾರಿಪುರ ತಾಲೂಕು ಸಭೆ : ಜೂ.22ರಂದು ಬೆಳಗ್ಗೆ 10.30ಕ್ಕೆ ಶಿಕಾರಿಪುರ ಸುವರ್ಣ ಸಾಂಸ್ಕೃತಿಕ ಭವನ.
ಸೊರಬ ತಾಲೂಕು ಸಭೆ : ಜೂ.23ರಂದು ಬೆಳಗ್ಗೆ 10.30ಕ್ಕೆ ಸೊರಬ ಶ್ರೀರಂಗ ಕನ್ವೆಂಷನ್ ಹಾಲ್.
ಸಾಗರ ತಾಲೂಕು ಸಭೆ : ಜೂ.23ರಂದು ಮಧ್ಯಾಹ್ನ 3ಕ್ಕೆ ಸಾಗರ ಎಲ್.ಬಿ.ಕಾಲೇಜು ಸಭಾಂಗಣ.
ನಿಗದಿತ ದಿನಾಂಕಗಳಂದು ಆಯಾ ತಾಲೂಕಿನ ಗ್ರಾಪ ಪಂಚಾಯಿತಿಗಳ ಸದಸ್ಯರುಗಳು ಹಾಜರಿರುವಂತೆ ತಿಳಿಸಲಾಗಿದೆ.