ಶಿವಮೊಗ್ಗ ಏರ್‌ಪೋರ್ಟ್‌, ವಿಮಾನ ಹಾರಾಟ, 3 ವಿಚಾರ ತಿಳಿಸಿದ ಸಂಸದ ರಾಘವೇಂದ್ರ, ಏನೇನು?

SHIVAMOGGA LIVE | 15 JUNE 2023

SHIMOGA : ವಿಮಾನ ನಿಲ್ದಾಣದಿಂದ (Airport) ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಕೊನೆಗು ದಿನಾಂಕ ನಿಗದಿಯಾಗಿದೆ. ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಮೂರು ಪ್ರಮುಖ ವಿಚಾರಗಳನ್ನು ತಿಳಿಸಿದರು. (ಈ ಸುದ್ದಿಯನ್ನು ಇನ್ನು 52 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

MP-BY-Raghavendra-Statement-about-Indigo-Flights

ಯಾವೆಲ್ಲ ಮೂರು ವಿಚಾರ?

ಇಂಟರ್‌ನ್ಯಾಷನಲ್‌ ಕೋಡ್‌ : ಜಾಗತಿಕವಾಗಿ ಪ್ರತಿ ವಿಮಾನ ನಿಲ್ದಾಣಕ್ಕೆ (Airport) ಪ್ರತ್ಯೇಕ ಕೋಡ್‌ ಇರಲಿದೆ. ಅದರಂತೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ RQY ಎಂಬ ಕೋಡ್‌ ನೀಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಗೊತ್ತಿರಬೇಕಾದ 10 ಪ್ರಮುಖ ಸಂಗತಿ ಇಲ್ಲಿದೆ

ವಿಮಾನ ಹಾರಾಟದ ದಿನಾಂಕ : ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಏರ್‌ಲೈನ್ಸ್‌ನ ವಿಮಾನ ಹಾರಾಟ ಶುರುವಾಗಲಿದೆ. ಆ.11ರಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲಿದೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್‌ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ವೆಬ್‌ಸೈಟ್‌ನಲ್ಲಿ ಪ್ರಕಟಣೆ : ಇಂಡಿಗೋ ಏರ್‌ಲೈನ್ಸ್‌ನ ವೆಬ್‌ಸೈಟ್‌ನಲ್ಲಿ ಇನ್ನೆರಡು ದಿನದಲ್ಲಿ ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟದ ಕುರಿತು ಪ್ರಕಟಣೆ ಹೊರಬೀಳಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
MP-BY-Raghavendra-Statement-about-Indigo-Flights

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment