ಶಿವಮೊಗ್ಗದಲ್ಲಿ ಒಂದು ಗಂಟೆ ಸುರಿದ ಮಳೆ, ವಿವಿಧೆಡೆ ರಸ್ತೆಗಳು ಜಲಾವೃತ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 20 JUNE 2023

SHIMOGA : ಒಂದು ಗಂಟೆಗೆ ಹೆಚ್ಚು ಕಾಲ ಸುರಿದ ಮಳೆಗೆ (One Hour Rain) ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದ್ದು, ಮನೆಗಳು, ವಿವಿಧ ಕಟ್ಟಡದೊಳಗೆ ನೀರು ಸೇರಿದೆ.

Heavy-Rain-at-Shimoga-city.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುಂಭಾಗದ ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿದಿದೆ. ನೀರಿನ ಮಟ್ಟ ಹೆಚ್ಚಳವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕುಗಳು ಪಲ್ಟಿಯಾಗಿದ್ದವು. ಈ ರಸ್ತೆಯಲ್ಲಿ ಸಂಚರಲಿಸಲು ವಾಹನ ಸವಾರರು ಪರಾದಾಡಬೇಕಾಯಿತು. ಪ್ರತಿ ಬಾರಿ ಜೋರು ಮಳೆಯಾದಾಗಲೆಲ್ಲ ಈ ಭಾಗದಲ್ಲಿ ನೀರು ನಿಲ್ಲುತ್ತಿದೆ.

PARISHRAMA NEET ACADEMY SHIVAMOGGA LIVE

ವೆಂಕಟೇಶ ನಗರದ ಸರ್ಕಾರಿ ಶಾಲೆ ಕ್ರೀಡಾಂಗಣವು ಜಲಾವೃತವಾಗಿದೆ. ಮಳೆ ನೀರು ಹರಿದು ಹೋಗಲು ಜಾಗವಿಲ್ಲದೆ ಕ್ರೀಡಾಂಗಣ ಸ್ವಿಮ್ಮಿಂಗ್‌ ಪೂಲ್‌ ಆಗಿ ಮಾರ್ಪಾಡಾಗಿತ್ತು. ಇನ್ನು, ಅಣ್ಣಾ ನಗರ, ಕೆ.ಆರ್‌.ಪುರಂ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.

ಒಂದು ಗಂಟೆಗೂ ಹೆಚ್ಚು ಹೊತ್ತು ಮಳೆ

ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಜೋರು ಮಳೆಯಾಗಿದೆ. ಒಂದು ಗಂಟೆಗು ಹೆಚ್ಚು ಹೊತ್ತು ಮಳೆ ಸುರಿದಿದೆ. ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಶಿವಮೊಗ್ಗದ ಜನರಿಗೆ ಮಳೆ ತಂಪೆರೆದಿದೆ.

rain1

ನಗರದ ವಿವಿಧೆಡೆ ಒಳಚರಂಡಿ ತುಂಬಿ ನೀರು ಹೊರಗೆ ಬಂದಿದೆ. ರಸ್ತೆಯ ಮೇಲೆಲ್ಲ ಚರಂಡಿ ನೀರು ಹರಿದಿದೆ. ಹಾಗಾಗಿ ವಾಹನ ಸವಾರರು ಈ ನಿಧಾನವಾಗಿ ಚಲಿಸಬೇಕಾಯಿತು.

ಇದನ್ನೂ ಓದಿ – ಫೇಸ್‌ಬುಕ್‌ನಲ್ಲಿ ಜಾಹೀರಾತು, ಫೋನಿನಲ್ಲಿ ಬಣ್ಣ ಬಣ್ಣದ ಮಾತು, ನಂಬಿದ ಶಿವಮೊಗ್ಗದ ವ್ಯಕ್ತಿಗೆ ಆಘಾತ ಕಾದಿತ್ತು, ಏನಿದು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment