ಶಿವಮೊಗ್ಗದಲ್ಲಿ ಕೆಲ ಹೊತ್ತು ಕೈಗಾರಿಕೆಗಳು ಬಂದ್‌, MRS ಸರ್ಕಲ್‌ನಲ್ಲಿ ಉದ್ಯಮಿಗಳು, ನೌಕರರ ಹೋರಾಟ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 22 JUNE 2023

SHIMOGA : ವಿದ್ಯುತ್‌ ದರ (Electricity Price) ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ. ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಉದ್ಯಮಿಗಳು, ನೌಕರರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಎಂಆರ್‌ಎಸ್‌ ಸರ್ಕಲ್‌ನಲ್ಲಿ ಭಿತ್ತಿ ಪತ್ರ ಹಿಡಿದು ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುಶಕ್ತಿ ನಿಯಂತ್ರಣ ಆಯೋಗದ ವಿರುದ್ಧ ಘೋಷಣೆ ಕೂಗಿದರು.

Industrialists-held-protest-in-Shimoga-MRS-Against-Power-price-hike

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಇಂಡಸ್ಟ್ರಿಯಲ್‌ ಏರಿಯಾ, ಕೈಗಾರಿಕೆ ಸಂಘಟನೆಗಳ ಪ್ರದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉದ್ಯಮಿಗಳ ಬೇಡಿಕೆಗಳೇನು?

ವಿದ್ಯುತ್‌ ದರದಲ್ಲಿನ ಫಿಕ್ಸೆಡ್‌ ಚಾರ್ಜ್‌, ವಿದ್ಯುತ್‌ ಶಕ್ತಿಯ ಯುನಿಟ್‌ ದರಗಳನ್ನ ಹಿಂದಿನ ಮಾದರಿಯಲ್ಲೆ ಮುಂದುವರೆಸಬೇಕು. ರಾಜ್ಯದಲ್ಲಿ ಜಲ ವಿದ್ಯುತ್‌ ಯೋಜನೆಗಳ ಮೂಲಕ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ತೈಲೋತ್ಪನ್ನಗಳ ಬಳಕೆಯಾಗುತ್ತಿಲ್ಲ. ಹಾಗಾಗಿ ವಿದ್ಯುತ್‌ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು. ವಿದ್ಯುತ್‌ ದರದ (Electricity Price) ಮೇಲಿನ ತೆರಿಗೆಯನ್ನು ಶೇ.9ರ ಬದಲು ಶೇ.3ಕ್ಕೆ ಇಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Shimoga Industrialists Protest at MRS Circle

ಯಾರೆಲ್ಲ ಏನೇನು ಹೇಳಿದರು?

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ರಾಜ್ಯದ ಇತಿಹಾಸದಲ್ಲೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್‌ ದರ ಹೆಚ್ಚಳ ಮಾಡಲಾಗಿದೆ. ಈವರೆಗೆ 35 ರಿಂದ 70 ಪೈಸೆ ಪ್ರತಿ ಯುನಿಟ್‌ಗೆ ಹೆಚ್ಚಳವಾಗುತ್ತಿತ್ತು. ಈಗ ಶೇ.15 ರಿಂದ 20ರಷ್ಟು ಹೆಚ್ಚಳವಾಗಿದೆ. ಎಲ್ಲ ಕೈಗಾರಿಕೆಗಳು ಇದನ್ನು ಭರಿಸುವ ಶಕ್ತಿ ಹೊಂದಿಲ್ಲ. ಈಗಾಗಲೆ ಕಚ್ಛಾವಸ್ತು, ಮಾನವ ಸಂಪನ್ಮೂಲದ ಕೊರತೆಯಿಂದ ಸೊರಗಿದ್ದೇವೆ. ವಿದ್ಯುತ್‌ ದರ ಹೆಚ್ಚಳದಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ.ಎಸ್‌.ರುದ್ರೇಗೌಡ, ವಿಧಾನ ಪರಿಷತ್‌ ಸದಸ್ಯ, ಉದ್ಯಮಿ

Shivamogga Live Editor Nitin Kaidotlu

ವಿದ್ಯುಶಕ್ತಿ ನಿಯಂತ್ರಣ ಆಯೋಗವು ವಿದ್ಯುತ್‌ ದರ ಹೆಚ್ಚಳ ಮಾಡಿರುವ ನಿರ್ಧಾರ ಹಿಂಪಡೆಯಬೇಕು. ಸರ್ಕಾರವು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ವಿದ್ಯುಶಕ್ತಿ ನಿಯಂತ್ರಣ ಆಯೋಗದ ಮೇಲೆ ತಮಗೆ ಹಿಡಿತವಿಲ್ಲ ಎನ್ನುತ್ತಿದೆ. ಇದೆ ಸ್ಥಿತಿ ಮುಂದುವರೆದರೆ ಕೈಗಾರಿಕೆಗಳನ್ನು ನಡೆಸುವುದು ಕಷ್ಟವಾಗಲಿದೆಗೋಪಿನಾಥ್‌, ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ

Shimoga Industrialists Protest at MRS Circle

ಕೋವಿಡ್‌ ಸಂದರ್ಭ ಕೈಗಾರಿಕೆಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇದರಿಂದ ಸುಧಾರಿಸಿಕೊಳ್ಳಲು ಇನ್ನು ಆಗಿಲ್ಲ. ಈಗ ವಿದ್ಯುತ್‌ ದರ ಹೆಚ್ಚಳದಿಂದ ಮತ್ತೊಂದು ಪೆಟ್ಟು ಬಿದ್ದಂತಾಗಿದೆ. ನಾವು ಯಾವಾಗಲೂ ಬೀದಿಗೆ ಬಂದು ಹೋರಾಟ ಮಾಡಿರಲಿಲ್ಲ. ಆದರೆ ಈಗ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.ಎಂ.ಎ.ರಮೇಶ್‌ ಹೆಗಡೆ, ಅಧ್ಯಕ್ಷರು, ಮಾಚೇನಹಳ್ಳಿ ಕೈಗಾರಿಕೆಗಳ ಸಂಘ

Shimoga Industrialists Protest at MRS Circle

ಇದನ್ನೂ ಓದಿ – ವಿದ್ಯುತ್‌ ದರ ಹೆಚ್ಚಳ, ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಸಭೆ, MLA ಹೇಳಿದ್ದೇನು? ಉಳಿದವರ ಆರೋಪಗಳೇನು?

ಎಂಆರ್‌ಎಸ್‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಕೈಗಾರಿಕೋದ್ಯಮಿಗಳು ಹರಿಗೆ ಸಮೀಪ ಇರುವ ವಿದ್ಯುತ್‌ ಭವನದವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು.

ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ದಿಢೀರ್‌ ಕೆಳಗೆ ಬಿದ್ದ ಬೃಹತ್‌ ರಾಷ್ಟ್ರಧ್ವಜ, ಆಟೋ ಚಾಲಕರಿಂದ ತ್ರಿವರ್ಣಕ್ಕೆ ಗೌರವ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment