SHIVAMOGGA LIVE | 22 JUNE 2023
SHIMOGA : ರೈಲ್ವೆ ನಿಲ್ದಾಣದ ಮುಂಭಾಗ ಇದ್ದ ಬೃಹತ್ ರಾಷ್ಟ್ರಧ್ವಜವು (Indian Flag) ಧ್ವಜಸ್ತಂಭದಿಂದ ಕೆಳಗೆ ಬಿದ್ದಿದೆ. ನಿಲ್ದಾಣದ ಬಳಿ ಇರುವ ಆಟೋ ಚಾಲಕರೆ ಧ್ವಜನ್ನು ರಕ್ಷಿಸಿ, ಮಡಚಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ರಾತ್ರಿ 7.45ರ ಹೊತ್ತಿಗೆ ಬೃಹತ್ ರಾಷ್ಟ್ರಧ್ವಜ ಧ್ವಜಸ್ತಂಭದಿಂದ ಕೆಳಗೆ ಬಿದ್ದಿದೆ. ಧ್ವಜಸ್ತಂಭದಲ್ಲಿನ ಹುಕ್ ತುಂಡಾಗಿದ್ದರಿಂದ ಘಟನೆ ಸಂಭವಿಸಿದೆ.
ಧ್ವಜಸ್ತಂಭದಲ್ಲಿ ಕಳಪೆ ಗುಣಮಟ್ಟದ ಹುಕ್ ಬಳಕೆ ಮಾಡಿರುವ ಸಾಧ್ಯತೆ ಇದೆ. ಹಾಗಾಗಿ ಧ್ವಜ ತುಂಡಾಗಿ ಕಳಗೆ ಬಿದ್ದಿದೆ. ಆ ಸಂದರ್ಭ ಪ್ರಯಾಣಿಕರಾರೂ ಇರಲಿಲ್ಲ. ಆಟೋ ಚಾಲಕರು, ಮಾಲೀಕರೆ ಹೋಗಿ ಧ್ವಜವನ್ನು ಗೌರವಯುತವಾಗಿ ಮಡಚಿದ್ದೇವೆ.ಸಂತೋಷ್, ರೈಲ್ವೆ ನಿಲ್ದಾಣದ ಆಟೋ ಚಾಲಕರ ಸಂಘದ ಅಧ್ಯಕ್ಷ
ವಿಡಿಯೋ ಲಿಂಕ್
ಧ್ವಜ (Indian Flag) ಕೆಳಗೆ ಬೀಳುತ್ತಿದ್ದಂತೆ ಆಟೋ ಚಾಲಕರು ಅದನ್ನು ಮಡಚಿದ್ದಾರೆ. ಬಳಿಕ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋ ಚಲಕರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೇಗಾಗಿದೆ ಕೆಲಸ? ಮೇಲ್ಭಾಗದಲ್ಲಿ ಹೇಗೆ ಕಾಣುತ್ತೆ? ಇಲ್ಲಿದೆ ಸೇತುವೆಯ 8 ವಿಶೇಷತೆ
ಇದನ್ನೂ ಓದಿ – ಶಿವಮೊಗ್ಗ, ಮೈಸೂರು, ಬೆಂಗಳೂರು ಪ್ರಯಾಣಿಕರೆ ಗಮನಿಸಿ, ಇನ್ನು 4 ದಿನ ರೈಲುಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ, ಏಕೆ?