ಶಿವಮೊಗ್ಗದ ಮೊದಲ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ ರೆಡಿ, ಹೇಗಿದೆ? ಎಷ್ಟು ಕಾರ್‌, ಬೈಕ್‌ ನಿಲ್ಲಿಸಬಹುದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE| 24 JUNE 2023

SHIMOGA : ಜಿಲ್ಲೆಯ ಮೊದಲ ಮಲ್ಟಿ ಲೆವೆಲ್‌ ಪಾರ್ಕಿಂಗ್‌ (Multi Level Parking) ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರಿಂದ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿನ ವಾಹನ ದಟ್ಟಣೆ ಮತ್ತು ಪಾರ್ಕಿಂಗ್‌ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ.

240623 Multilevel Car parking in Shimoga city

ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆ ಮುಂಭಾಗ ಬಿ.ಹೆಚ್‌.ರಸ್ತೆಗೆ ಹೊಂದಿಕೊಂಡಂತೆ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ 10 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. ಇದರಿಂದ ಬಿ.ಹೆಚ್‌.ರಸ್ತೆ, ಗಾಂಧಿ ಬಜಾರ್‌, ನೆಹರು ರಸ್ತೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ನೀಗಲಿದೆ.

ಹೇಗಿದೆ ಮಲ್ಟಿ ಲೆವೆಲ್‌ ಪಾರ್ಕಿಂಗ್ ಕಟ್ಟಡ?‌

ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡ ಬೇಸ್‌ಮೆಂಟ್‌ ಮತ್ತು ನಾಲ್ಕು ಅಂತಸ್ತು ಹೊಂದಿದೆ. ಈ ಪೈಕಿ ನಾಲ್ಕು ಅಂತಸ್ತಿನಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶವಿದೆ.

Shimoga Multi Level Car Parking

118 ಮಳಿಗೆ ನಿರ್ಮಾಣ

ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ (Multi Level Parking) ಕಟ್ಟಡ ನಿರ್ಮಾಣಕ್ಕು ಮೊದಲು ಇಲ್ಲಿ ಹೂವು,ಹಣ್ಣು, ತರಕಾರಿ ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳಿದ್ದವು. ಕಟ್ಟಡ ನಿರ್ಮಾಣಕ್ಕಾಗಿ ಅವರನ್ನು ತಾತ್ಕಾಲಿಕವಾಗಿ ಖಾಸಗಿ ಬಸ್‌ ನಿಲ್ದಾಣದ ಬಳಿ ಶಿಫ್ಟ್‌ ಮಾಡಲಾಗಿತ್ತು. ಈ ಮೊದಲೆ ಭರವಸೆ ನೀಡಿದಂತೆ ಆ ವ್ಯಾಪಾರಿಗಳಿಗೆ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಒಂದೇ ಅಳತೆಯ 118 ಮಳಿಗೆ ನಿರ್ಮಿಸಲಾಗಿದೆ.

Shimoga Multi Level Car Parking

ಮಳಿಗೆಗಳು ಪ್ರತ್ಯೇಕವಾಗಿದ್ದು, ರೋಲಿಂಗ್‌ ಶಟರ್‌ಗಳನ್ನು ಹೊಂದಿವೆ. ಗ್ರಾಹಕರು ಬಂದು ಹೋಗಲು ಸೂಕ್ತ ಸ್ಥಳವಕಾಶ, ಗಾಳಿ, ಬೆಳಕಿನ ವ್ಯವಸ್ಥೆ ಇದೆ.

Shimoga Multi Level Car Parking

ಬೇಸ್‌ಮೆಂಟ್‌ನಲ್ಲಿ ಬೈಕ್‌ ಪಾರ್ಕಿಂಗ್‌

ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡದಲ್ಲಿ ಬೈಕ್‌ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳವಿದೆ. ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಸುಮಾರು 80 ಬೈಕ್‌ ನಿಲ್ಲಿಸಲು ಅವಕಾಶವಿದೆ. ಬೈಕುಗಳು ಪಾರ್ಕಿಂಗ್‌ ಸ್ಥಳದ ಒಳಗೆ ಹೋಗಲು ಮತ್ತು ಹೊರ ಬರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Shimoga Multi Level Car Parking

ಮೂರು ಮಹಡಿಯಲ್ಲಿ ಕಾರ್‌ ಪಾರ್ಕಿಂಗ್‌

ಕಟ್ಟಡದ ಮೊದಲ ಮಹಡಿಯಿಂದ ಮೂರನೆ ಮಹಡಿವರೆಗೆ ಕಾರ್‌ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. 172 ಕಾರುಗಳನ್ನು ಇಲ್ಲಿ ನಿಲ್ಲಿಸಬಹುದಾಗಿದೆ. ಪ್ರತಿ ಕಾರಿಗು ನಿರ್ದಿಷ್ಟ ಸ್ಥಳ ನಿಗದಿ ಮಾಡಲಾಗುತ್ತದೆ.

Shimoga Multi Level Car Parking

ಕಾರುಗಳು ಕಟ್ಟಡದೊಳಗೆ ಬರಲು ಮತ್ತು ಹೊರ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನು, ಒಂದು ಫ್ಲೋರ್‌ನಿಂದ ಮತ್ತೊಂದು ಫ್ಲೋರ್‌ಗೆ ಕಾರುಗಳು ಸುಲಭವಾಗಿ ಹೋಗಿ ಬರಲು ಇಳಿಜಾರು ಮಾಡಲಾಗಿದೆ.

Shimoga Multi Level Car Parking

ವಾಹನಗಳಿಗೆ ಸುರಕ್ಷತೆ, ಮಳೆ ಕೊಯ್ಲು

ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡದಲ್ಲಿ ಅಗತ್ಯ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್‌ ಸಬ್‌ ಸ್ಟೇಷನ್‌ ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್‌ ಸೇಫ್ಟಿ ವ್ಯವಸ್ಥೆ ಮಾಡಲಾಗಿದೆ. ಇನ್ನು ತುರ್ತು ಸಂದರ್ಭ ಸ್ವಯಂ ಚಾಲಿತ ಸೆನ್ಸರ್‌ ಆಧಾರಿತ ಫೈರ್‌ ಸೇಫ್ಟಿ ಇದೆ. ಇವುಗಳ ಪರೀಕ್ಷೆ ಮಾಡಲಾಗಿದೆ.

Shimoga Multi Level Car Parking

ಇನ್ನು, ಕಾರು ಪಾರ್ಕಿಂಗ್‌ ಮಾಡಿದವರು ಕಟ್ಟಡದ ಮೇಲೆ, ಕೆಳಗೆ ಹೋಗಿ ಬರಲು ಲಿಫ್ಟ್‌ ಮತ್ತು ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ.

Shimoga Multi Level Car Parking

ಈ ಕಟ್ಟಡದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಇದೆ. ಮಳೆ ನೀರನ್ನು ಪ್ರತ್ಯೇಕವಾಗಿ ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ಬಳಕೆ ಮಾಡಲಾಗುತ್ತದೆ. ಕಟ್ಟಡದ ಪಕ್ಕದಲ್ಲಿ ಮಹಾನಗರ ಪಾಲಿಕೆಗೆ ಹೊಂದಿಕೊಂಡಂತೆ ದೊಡ್ಡ ಟ್ಯಾಂಕ್‌ ನಿರ್ಮಿಸಲಾಗಿದೆ. 2.5 ಲಕ್ಷ ಲೀಟರ್‌ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ.

Shimoga Multi Level Car Parking

25 ಕೋಟಿ ರೂ. ವೆಚ್ಚ

10 ಸಾವಿರ ಚದರ ಅಡಿಯಲ್ಲಿ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲಾಗಿದೆ. 2021ರ ಜನವರಿಯಲ್ಲಿ ಆರಂಭವಾದ ಕಾಮಗಾರಿ ಈಗ ಕೊನೆಯ ಹಂತಕ್ಕೆ ತಲುಪಿದೆ.

Shimoga Multi Level Car Parking

25 ಕೋಟಿ ರೂ. ವೆಚ್ಚದಲ್ಲಿ ಈ ಕಾರ್‌ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಇದು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಕಾರ್‌ ಮತ್ತು ಬೈಕ್‌ ಪಾರ್ಕಿಂಗ್‌ಗೆ ಪ್ರತ್ಯೇಕ ದರ ನಿಗದಿಯಾಗಲಿದೆ. ಮಹಾನಗರ ಪಾಲಿಕೆ ವತಿಯಿಂದ ಇದರ ನಿರ್ವಹಣೆ ಮಾಡಲಾಗುತ್ತದೆ.

ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೇಗಾಗಿದೆ ಕೆಲಸ? ಮೇಲ್ಭಾಗದಲ್ಲಿ ಹೇಗೆ ಕಾಣುತ್ತೆ? ಇಲ್ಲಿದೆ ಸೇತುವೆಯ 8 ವಿಶೇಷತೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment