ಟಿಪ್ಪು ನಗರ, ದ್ರೌಪದಮ್ಮ ಸರ್ಕಲ್‌ನಲ್ಲಿ ಪ್ರತ್ಯೇಕ ಹಲ್ಲೆ ಕೇಸ್‌, ಈವರೆಗೂ 10 ಮಂದಿ ಅರೆಸ್ಟ್‌

SHIVAMOGGA LIVE | 28 JUNE 2023

SHIMOGA : ಟಿಪ್ಪು ನಗರ ಮತ್ತು ದ್ರೌಪದಮ್ಮ ವೃತ್ತದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ. ಹಲ್ಲೆ ಪ್ರಕರಣ  (Assault Case) ಮತ್ತು ಸಾಲು ಸಾಲು ಹಬ್ಬಗಳು ಇರುವುದರಿಂದ ಶಿವಮೊಗ್ಗದಲ್ಲಿ ಬಂದೋಬಸ್ತ್‌ ಹೆಚ್ಚಳ ಮಾಡಲಾಗಿದೆ.

Tippu-Nagara-Main-Road-in-Shimoga

ಕಳೆದ ಭಾನುವಾರ ಶಿವಮೊಗ್ಗದ ಟಿಪ್ಪುನಗರದಲ್ಲಿ ಕ್ಷುಲಕ ವಿಚಾರಕ್ಕೆ ಸಂದೇಶ ಎಂಬಾತನ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ಮಾಡಿತ್ತು. ಘಟನೆ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ಈ ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ – ಭದ್ರಾವತಿಯ ಯುವಕನಿಗೆ 3 ವರ್ಷ ಜೈಲು, 2.88 ಲಕ್ಷ ರೂ. ದಂಡ, ಕಾರಣವೇನು?

ಇನ್ನು, ವಿಜಯ ಕುಮಾರ್‌ ಎಂಬಾತನನ್ನು ಫೋನ್‌ ಮಾಡಿ ದ್ರೌಪದಮ್ಮ ಸರ್ಕಲ್‌ಗೆ ಕರೆಸಿಕೊಂಡು ಸ್ಕ್ರೂ ಡ್ರೈವರ್‌ನಿಂದ ಚುಚ್ಚಲಾಗಿತ್ತು. ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಎರಡು ಘಟನೆ ಸಂಭವಿಸಿದ್ದವು.

ನಗರದಲ್ಲಿ ಭದ್ರತೆ ಹೆಚ್ಚಳ

ಈ ಘಟನೆಗಳ ಬೆನ್ನಿಗೆ ಶಿವಮೊಗ್ಗ ನಗರದಲ್ಲಿ ಬಂದೋಬಸ್ತ್‌ ಹೆಚ್ಚಳ ಮಾಡಲಾಗಿದೆ. ಹೆಚ್ಚುವರಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಶಿವಮೊಗ್ಗದ ಅಮೀರ್‌ ಅಹಮದ್‌ ವೃತ್ತ ಮತ್ತು ಸೀಗೆಹಟ್ಟಿ ಸರ್ಕಲ್‌ನಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ಸದಾ ನಿಯೋಜನೆ ಮಾಡಲಾಗುತ್ತದೆ. ಈಗ ಹೆಚ್ಚುವರಿಯಾಗಿ ಇನ್ನು ಮೂರು ತುಕಡಿಯನ್ನು ನಗರದಲ್ಲಿ ನಿಯೋಜಿಸಲಾಗಿದೆ. ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್‌ನಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿ ನಿಯೋಜಿಸಲಾಗಿದೆ.

ಇದನ್ನೂ ಓದಿ – ತಾಳಗುಪ್ಪ – ಶಿವಮೊಗ್ಗ – ಮೈಸೂರು ರಾತ್ರಿ ರೈಲು ಸೇರಿ ಮೂರು ರೈಲುಗಳ ಸಮಯಲ್ಲಿ ಮಹತ್ವದ ಬದಲಾವಣೆ

ಬಕ್ರೀದ್‌ ಸೇರಿದಂತೆ ಮುಂಬರುವ ಹಬ್ಬಗಳನ್ನು ಗಮನದಲ್ಲಿ ಇರಿಸಿಕೊಂಡು ಬಂದೋಬಸ್ತ್‌ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

© ಶಿವಮೊಗ್ಗ ಲೈವ್‌ : June 28, 2023

Leave a Comment