ಶಿವಮೊಗ್ಗದಲ್ಲಿ ಇಂಜಿನಿಯರ್‌ ಪತ್ನಿ ಕೊಲೆ ಕೇಸ್‌, ಕಾರು ಚಾಲಕ ಸೇರಿ ಆರು ಮಂದಿ ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 28 JUNE 2023

SHIMOGA : ಇಂಜಿನಿಯರ್‌ ಪತ್ನಿ ಹತ್ಯೆ ಕೇಸ್‌ನ ಪ್ರಮುಖ ಆರೋಪಿ ಕಾರು ಚಾಲಕ (Car Driver) ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜೂ.17ರಂದು ಶಿವಮೊಗ್ಗದ ವಿಜಯನಗರದಲ್ಲಿ ಒಂಟಿ ಮಹಿಳೆಯ ಹತ್ಯೆ ಮಾಡಿ, 35 ಲಕ್ಷ ರೂ. ಹಣ ದೋಚಿದ್ದರು.

Kamalamma-Killed-in-Vijayanagara-in-Shimoga

ಪ್ರಕರಣದ ಪ್ರಮುಖ ಆರೋಪಿ ಕಾರು ಚಾಲಕ ಹನುಮಂತ ನಾಯ್ಕ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಇವತ್ತು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ  ಇದೆ.

ಇದನ್ನೂ ಓದಿ – ಶಿವಮೊಗ್ಗ ಬೈಪಾಸ್‌ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕರೆಂಟ್‌ ಶಾಕ್‌, ಇಬ್ಬರು ಸ್ಥಳದಲೇ ಸಾವು

ವಿಜಯನಗರದ 2ನೇ ತಿರುವಿನಲ್ಲಿರುವ ನೀರಾವರಿ ಇಲಾಖೆ ಇಂಜಿನಿಯರ್‌ ಮನೆಗೆ ನುಗ್ಗಿದ್ದ ಆರೋಪಿಗಳು, ಇಂಜಿನಿಯರ್‌ ಪತ್ನಿ ಕಮಲಮ್ಮ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ತನಿಖೆ ನಡೆಸಿದ ತುಂಗಾ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ – ಇಂಜಿನಿಯರ್‌ ಪತ್ನಿ ಹತ್ಯೆ ಕೇಸ್‌, ಮನೆಯಲ್ಲಿದ್ದ 35 ಲಕ್ಷ ರೂ. ಹಣ ಮಿಸ್ಸಿಂಗ್‌, ಒಬ್ಬನ ಮೇಲೆ ಅನುಮಾನ, ಯಾರದು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment