ಶಿವಮೊಗ್ಗದಲ್ಲಿ ಮುಕ್ಕಾಲು ಮುಳುಗಿದ ಮಂಟಪ, ಹತ್ತಿರ ಹೋಗಿ ನೋಡಲು ಜನರಿಗಿಲ್ಲ ಅವಕಾಶ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 7 JULY 2023

SHIMOGA : ತುಂಗಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಕೋರ್ಪಲಯ್ಯ ಛತ್ರ ಮಂಟಪದ (Mantapa) ಬಹುಭಾಗ ಮುಳುಗಿದೆ.

Shivamogga-Live-Number-1-Website

Tunga River Mantapa In Shimoga city

ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ಜಲಾಶಯದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದ್ದರಿಂದ ಶಿವಮೊಗ್ಗದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

Tunga river in Shimoga City

ಮಂಟಪ ಮುಳುಗಲು ಮೂರಡಿ ಬಾಕಿ

ತುಂಗಾ ನದಿಯಲ್ಲಿರುವ ಕೋರ್ಪಲಯ್ಯ ಛತ್ರ ಮಂಟಪ (Mantapa) ಮುಕ್ಕಾಲು ಭಾಗ ಮುಳುಗಿದೆ. ಮಂಟಪ ಸಂಪೂರ್ಣ ಮುಳುಗಲು ಇನ್ನು ಮೂರು ಅಡಿ ಬಾಕಿ ಇದೆ. ಜನರು ಶಿವಮೊಗ್ಗದ ಹಳೆ ಸೇತುವೆ ಮೇಲೆ ನಿಂತು ಮುಕ್ಕಾಲು ಮುಳುಗಿರುವ ಮಂಟಪವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರ ಫೋಟೋ, ವಿಡಿಯೋಗಳನ್ನು ಕ್ಲಿಕ್‌ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ಸಂಭ್ರಮಿಸುತ್ತಿದ್ದಾರೆ.ʼ

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್‌

Tunga River Bridge In Shimoga city

ಮಂಟಪದ ಬಳಿ ಹೋಗಲು ಅವಕಾಶವಿಲ್ಲ

ಪ್ರತಿ ಬಾರಿ ಮಂಟಪ ಮುಳುಗಿದಾಗಲು ಜನರು ಕೋಟೆ ರಸ್ತೆ ಮೂಲಕ ಮಂಟಪದ ಬಳಿಗೆ ಹೋಗಿ ವೀಕ್ಷಿಸುತ್ತಿದ್ದರು. ಆದರೆ ಎರಡು ವರ್ಷದಿಂದ ಸ್ಮಾರ್ಟ್‌ ಸಿಟಿ ಕಾಮಗಾರಿ ಹಿನ್ನೆಲೆ ಮಂಟಪದ ಬಳಿ ಹೋಗಲು ಜನರಿಗೆ ಅವಕಾಶವಿಲ್ಲದಾಗಿದೆ. ನದಿ ದಂಡೆ ಮೇಲೆ ವಾಕಿಂಗ್‌ ಪಾತ್‌ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಹಿನ್ನೆಲೆ ಮಂಟಪದ ಬಳಿಗೆ ಹೋಗುವ ಎಲ್ಲಾ ಮಾರ್ಗದಲ್ಲಿಯು ಗೇಟ್‌ಗಳನ್ನು ನಿರ್ಮಿಸಿ, ಬೀಗ ಹಾಕಲಾಗಿದೆ. ಕೆಲಸದ ಸಿಬ್ಬಂದಿ ಹೊರತು ಉಳಿದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಕಳೆದ ಮಳೆಗಾಲದಲ್ಲೂ ಇದೆ ಪರಿಸ್ಥಿತಿ ಇತ್ತು. ಆಗಲು ಜನರು ಮಂಟಪದ ಬಳಿ ಹೋಗಲು ನಿರ್ಬಂಧ ವಿಧಿಸಲಾಗಿತ್ತು.

ಇದನ್ನೂ ಓದಿ – ಗಾಜನೂರು ತುಂಗಾ ಡ್ಯಾಂನ 12 ಗೇಟ್‌ ಓಪನ್‌, ಒಳ ಹರಿವು ಎಷ್ಟಿದೆ? ಹೊರ ಹೋಗುತ್ತಿರುವ ನೀರೆಷ್ಟು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 7, 2023

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್‌ 11 ಕೊನೆಯ ದಿನ

ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್‌ 11 ಕೊನೆಯ ದಿನ

ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

Leave a Comment