ದಿಢೀರ್‌ ಕುಸಿದು ಪ್ರಾಣ ಬಿಟ್ಟಿತು ದನ, ನೀರು ಕುಡಿಸಲು ಹತ್ತಿರ ಹೋದವರಿಗೆ ಆಘಾತ, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ದೌಡು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Modern Concrete

SHIVAMOGGA LIVE | 12 JULY 2023

SHIMOGA : ರಸ್ತೆಯಲ್ಲಿ ಸಾಗುತ್ತಿದ್ದ ದನವೊಂದಕ್ಕೆ ವಿದ್ಯುತ್ ಶಾಕ್‌ (Electric Shock) ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದೆ. ನಿತ್ಯ ಸಾವಿರಾರು ಜನರು ಓಡಾಡುವ ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ.

Shivamogga-Live-Number-1-Website

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ನವುಲೆ ಕಡೆಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದ ಮನೆ ಮುಂಭಾಗ ದನಕ್ಕೆ ವಿದ್ಯುತ್‌ ಶಾಕ್‌ (Electric Shock) ತಗುಲಿದೆ. ನಡೆದು ಹೋಗುತ್ತಿದ್ದ ದನ ದಿಢೀರ್‌ ಕುಸಿದು ಬಿದ್ದು, ಒದ್ದಾಡಿ ಪ್ರಾಣ ಬಿಟ್ಟಿದೆ.

ಏನಿದು ಘಟನೆ? ಆಗಿದ್ದೇನು?

ನವುಲೆಯಿಂದ ಬಂದಿದ್ದ ದನವೊಂದು ಸವಳಂಗ ರಸ್ತೆಯಲ್ಲಿ ಸಾಗುತ್ತಿತ್ತು. ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಮೊದಲ ಪಿಲ್ಲರ್‌ ಎದುರಿನ ಮನೆ ಮುಂದೆ, ಬಾಕ್ಸ್‌ ಚರಂಡಿ ಮೇಲೆ ತೆರಳುತ್ತಿದ್ದಾಗ ದನಕ್ಕೆ ವಿದ್ಯುತ್‌ ಶಾಕ್‌ ಹೊಡೆದಿದೆ. ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ವೈಯರ್‌ ಬಾಕ್ಸ್‌ ಚರಂಡಿ ಮೇಲೆ ಹಾಕಲಾಗಿತ್ತು. ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ವಾಹನಗಳು ಇದೆ ಬಾಕ್ಸ್‌ ಚರಂಡಿ ಮೇಲೆ ಹಾದು ಹೋಗುತ್ತಿದ್ದವು. ಹಾಗಾಗಿ ವಯರ್‌ ಸವೆದು ಹೋಗಿತ್ತು. ದನ ಅದರ ಮೇಲೆ ಕಾಲಿಟ್ಟಾಗ ಶಾಕ್‌  ಹೊಡೆದಿದೆ.

Electric-Shock-for-a-cow-At-Savalanga-road

ಇದನ್ನೂ ಓದಿ – ‘ಶಿವಮೊಗ್ಗ ನಗರಕ್ಕೆ ಮಂಜೂರಾಗಿದ್ದ ಸರ್ಕಾರಿ ಬಸ್ಸುಗಳು ಎಲ್ಲಿ?’

ತಪ್ಪಿತು ದೊಡ್ಡ ಅನಾಹುತ

ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಇದೆ ರಸ್ತೆಯಲ್ಲಿ ಓಡಾಡುತ್ತಾರೆ. ಈ ವಯರ್‌ ಮೇಲೆ ಜನರು ಕಾಲಿಟ್ಟಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸದ್ಯತೆ ಇತ್ತು. ದನಕ್ಕೆ ವಿದ್ಯುತ್‌ ಶಾಕ್‌ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು. ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ವಯರ್‌ ಕಟ್‌ ಮಾಡಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 12, 2023

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್‌ 11 ಕೊನೆಯ ದಿನ

ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್‌ 11 ಕೊನೆಯ ದಿನ

ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

Leave a Comment