ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 15 JULY 2023
SHIMOGA : ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಆರಂಭಕ್ಕೆ ಈಗಾಗಲೆ ದಿನಾಂಕ ನಿಗದಿಯಾಗಿದೆ. ಬೆಂಗಳೂರು – ಶಿವಮೊಗ್ಗ ನಡುವೆ ಪ್ರತಿದಿನ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಜು.20ರಿಂದ ಇಂಡಿಗೋ ಸಂಸ್ಥೆ ಟಿಕೆಟ್ ಬುಕ್ಕಿಂಗ್ (Ticket Booking) ಕೂಡ ಆರಂಭಿಸಲಿದೆ.
ಆ.11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯ ವಿಮಾನಗಳು ಹಾರಾಟ ಆರಂಭಿಸಲಿವೆ. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು 10.30ಕ್ಕೆ ವಿಮಾನ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ.
ಟಿಕೆಟ್ ಬಕ್ಕಿಂಗ್ ಶುರುವಾಗಲಿದೆ
ಇಂಡಿಗೋ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ಪ್ರಕಟಿಸಿದೆ. ಆದರೆ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಿರಲಿಲ್ಲ. ಈಗ ಟಿಕೆಟ್ ಬುಕ್ಕಿಂಗ್ (Ticket Booking) ಆರಂಭಿಸಲು ಇಂಡಿಗೋ ಸಂಸ್ಥೆ ನಿರ್ಧರಿಸಿದ್ದು, ಜು.20ರಿಂದ ಬುಕ್ಕಿಂಗ್ ಆರಂಭವಾಗಲಿದೆ. ಈ ಸಂಬಂಧ ಏಜೆಂಟ್ಗಳಿಗು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ – GOOD NEWS – ಶಿವಮೊಗ್ಗದಿಂದ 4 ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅನುಮತಿ, ಯಾವ್ಯಾವ ಮಾರ್ಗಗಳು?
ನಿಗದಿತ ದಿನಂಕದಂದು ಹಾರಾಟ ಶುರು

78 ಸೀಟರ್ನ ವಿಮಾನ ಹಾರಾಟ
ಈ ಮಾರ್ಗಕ್ಕೆ ಇಂಡಿಗೋ ಸಂಸ್ಥೆ ಎಟಿಅರ್ 72 ಮಾದರಿಯ ವಿಮಾನವನ್ನು ಈ ಮಾರ್ಗದಲ್ಲಿ ಹಾರಿಸಲಿದೆ. ಇದರಲ್ಲಿ 78 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. 2+2 ಮಾದರಿ ಸೀಟುಗಳು ಇರಲಿವೆ. ಇಬ್ಬರು ಪೈಲೆಟ್, ಸಿಬ್ಬಂದಿ ವಿಮಾನದಲ್ಲಿ ಇರಲಿದ್ದಾರೆ.

LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು





