ಹೈವೇಯಲ್ಲಿ ಅಪಘಾತ, ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಡ್ರಮ್‌ ಕಂಡು ಜನಕ್ಕೆ ಶಾಕ್‌ – ಮತ್ತಷ್ಟು ಸುದ್ದಿ ಇಲ್ಲಿದೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 16 JULY 2023

ಅಪಘಾತಕ್ಕೀಡಾದ ಕಾರಿನ ಹಿಂಬದಿ ಸೀಟಿನಲ್ಲಿ ಡ್ರಮ್‌ನಲ್ಲಿ ಮಾಂಸ

SAGARA : ಚಲಿಸುತ್ತಿದ್ದ ಎರಡು ಕಾರುಗಳಿಗೆ (CAR) ಖಾಸಗಿ ಬಸ್‌ ಡಿಕ್ಕಿ FATAFAT NEWS 1 jpgಹೊಡೆದಿದೆ. ಈ ವೇಳೆ ಒಂದು ಕಾರಿನ ಹಿಂಬದಿ ಸೀಟ್‌ನಲ್ಲಿ ಡ್ರಮ್‌ನಲ್ಲಿ ಮಾಂಸ ಪತ್ತೆಯಾಗಿದ್ದು, ಗೋಮಾಂಸದ ಕುರಿತು ಶಂಕೆ ವ್ಯಕ್ತವಾಗಿದೆ. ಸಾಗರ ತಾಲೂಕು ಐಗಿನ ಬೈಲು ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್‌, ಇನ್ನೋವಾ ಮತ್ತು ಅಸೆಂಟ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು ಕಾರುಗಳು ರಸ್ತೆ ಬದಿಗೆ ಹೋಗಿ ನಿಂತಿವೆ. ಈ ವೇಳೆ ಅಸೆಂಟ್‌ ಕಾರಿನಲ್ಲಿದ್ದವರು ಕಾರು (CAR) ಬಿಟ್ಟು ಪರಾರಿಯಾಗಿದ್ದಾರೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಅಸೆಂಟ್‌ ಕಾರಿನ ಹಿಂಬದಿಯಲ್ಲಿ ಡ್ರಮ್‌ನಲ್ಲಿ ಮಾಂಸ ಪತ್ತೆಯಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Iginabailu in Sagara Taluk

FATAFAT-MORE-NEWS

ತೆರಿಗೆ ಕಟ್ಟದ ವಾಹನಗಳು ವಶಕ್ಕೆ

SAGARA : ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರಿಗೆ FATAFAT NEWS 2 jpgಪಾವತಿಸದೆ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ 4.75 ಲಕ್ಷ ರೂ. ದಂಡ ಸಹಿತ ತೆರಿಗೆ ವಸೂಲಿ ಮಾಡಿದ್ದಾರೆ. ಒಂದು ಜೆಸಿಬಿ, ಅಗತ್ಯಕ್ಕಿಂತಲೂ ಹೆಚ್ಚಿನ ಲೋಡ್‌ ತುಂಬಿಕೊಂಡು ಸಾಗುತ್ತಿದ್ದ 12 ಚಕ್ರದ ಎರಡು ಲಾರಿಗಳು, ಸರೆಂಡರ್‌ ಆಗಿದ್ದರೂ ತೆರಿಗೆ ಪಾವತಿಸದೆ ಓಡಾಡುತ್ತಿದ್ದ ಒಂದು ಮ್ಯಾಕ್ಸಿ ಕ್ಯಾಬ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಸಹಾಯಕ ಸಾರಿಗೆ ಅಧಿಕಾರಿ ರಾಕೇಶ್‌ ನೇತೃತ್ವದಲ್ಲಿ, ಹಿರಿಯ ಮೋಟರ್‌ ವಾಹನ ನಿರೀಕ್ಷಕ ಬಿ.ವಾಸುದೇವ್‌, ಸಿಬ್ಬಂದಿ ಕೆ.ಬಿ.ಉಮೇಶ್‌, ಪಂಚಾಕ್ಷರಿ ಮತ್ತು ಗೃಹ ರಕ್ಷಕ ಸಿಬ್ಬಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ – ಶಿವಮೊಗ್ಗದ ಕಾಲೇಜುಗಳ ಬಳಿ ಬೈಕ್‌ ಸ್ಟಂಟ್‌ ಮಾಡಿದವರಿಗೆ ಪೊಲೀಸರಿಂದ ಶಾಕ್‌ – ಇಲ್ಲಿದೆ ಮತ್ತಷ್ಟು ಸುದ್ದಿಗಳು

FATAFAT-MORE-NEWS

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

SHIMOGA : ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತಲೂ ಹೆಚ್ಚಿ FATAFAT NEWS 3 jpgಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ. ಶಿವಮೊಗ್ಗದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ದೇವಸ್ಥಾನದ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9480768326, 9844256994 ಸಂಪರ್ಕಿಸಬಹುದು.

Malnad Concrete

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment