ಶಿವಮೊಗ್ಗ ಜಿಲ್ಲೆಗೆ ಆರೆಂಜ್‌ ಅಲರ್ಟ್‌, ತುಂಗಾ ಡ್ಯಾಂ ಎಲ್ಲ ಗೇಟ್‌ ಓಪನ್‌, ನಗರದಲ್ಲಿ ನದಿ ನೀರಿನ ಮಟ್ಟ ಏರಿಕೆ

SHIVAMOGGA LIVE | 22 JULY 2023

SHIMOGA : ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ತುಂಗಾ ಜಲಾಶಯದ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಜಲಾಶಯದ ಎಲ್ಲ ಗೇಟುಗಳನ್ನು ಮೇಲೆತ್ತಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತ ಇದೆ. ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ (Orange Alert) ಘೋಷಿಸಲಾಗಿದೆ.

Ready%20Compund%20New1

ತುಂಗಾ ಜಲಾಶಯದಿಂದ ಪ್ರಸ್ತುತ 41,360 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕೋರ್ಪಲಯ್ಯ ಛತ್ರ ಮಂಟಪ ಬಹುಭಾಗ ಮುಳುಗಡೆಯಾಗಿದೆ. ಇನ್ನೊಂದು ಅಡಿಯಷ್ಟು ನೀರು ಏರಿಕೆಯಾದರೆ ಮಂಟಪ ಜಲಾವೃತವಾಗಲಿದೆ.

VIDEO

ಸೇತುವೆ ಮೇಲೆ ನಿಂತು ಫೋಟೊ, ವಿಡಿಯೋ

ತುಂಗಾ ನದಿಯಲ್ಲಿ ಹೆಚ್ಚಿನ ನೀರಿನ ಹರಿಯುತ್ತಿರುವುದು, ಕೋರ್ಪಲಯ್ಯ ಛತ್ರ ಮಂಟಪ ಬಹುಭಾಗ ಮುಳುಗಿರುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ತುಂಗಾ ನದಿ ಹಳೆ ಸೇತುವೆ ಮೇಲೆ ನಿಂತು ಮೊಬೈಲ್‌ಗಳಲ್ಲಿ ಫೋಟೋ, ವಿಡಿಯೋಗಳನ್ನು ಕ್ಲಿಕ್‌ ಮಾಡಿಕೊಳ್ಳುತ್ತಿದ್ದಾರೆ.

Kalleshwara-Enterprises.webp

ಭದ್ರಾ, ಲಿಂಗನಮಕ್ಕಿ ಒಳ ಹರಿವು ಹೆಚ್ಚಳ

ಜಲಾನಯನ ಪ್ರದೇಶದ ವಿವಿಧೆಡೆ ಜೋರು ಮಳೆಯಾಗುತ್ತಿರುವುದರಿಂದ ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಿಗು ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಇವತ್ತು ಲಿಂಗನಮಕ್ಕಿ ಡ್ಯಾಂಗೆ 39,536 ಕ್ಯೂಸೆಕ್‌ ಒಳ ಹರಿವು ಇದೆ. ಜಲಾಶಯದ ನೀರಿನ ಮಟ್ಟ 1767.30 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಜಲಾಶಯದಲ್ಲಿ 2.65 ಅಡಿಯಷ್ಟು ನೀರ ಹೆಚ್ಚಳವಾಗಿದೆ.

Parishrama Neet Academy

ಭದ್ರಾ ಜಲಾಶಯಕ್ಕೆ ಬೆಳಗ್ಗೆ 5039 ಸಾವಿರ ಕ್ಯೂಸೆಕ್‌ ಒಳ ಹರಿವು ಇತ್ತು. ಸಂಜೆ ವೇಳೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆಯಾದ ಹಿನ್ನೆಲೆ ಒಳ ಹರಿವು ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ರಾತ್ರಿ ಇಡೀ ಸುರಿದ ಮಳೆ, ಎಲ್ಲೆಲ್ಲಿ ಹೇಗಿತ್ತು ವರುಣಾರ್ಭಟ? ಕೆಲ ಶಾಲೆಗಳಿಗೆ ರಜೆ

ಶಿವಮೊಗ್ಗದಲ್ಲಿ ಆರೆಂಜ್‌ ಅಲರ್ಟ್‌

ಜಿಲ್ಲೆಯಾದ್ಯಂತ ಮಳೆ ಮತ್ತಷ್ಟು ಬಿರುಸಾಗಲಿದೆ (Orange Alert) ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನು ಮೂರು ಗಂಟೆಯಲ್ಲಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ಯಾದಗಿರಿ ಸೇರಿದಂತೆ ವಿವಿಧೆಡೆ ಮಳೆ ಅಬ್ಬರಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

Rain-At-Shimoga-City
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment