ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 28 JULY 2023
SHIMOGA : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಆಡಳಿತ ಅವಧಿ ಇನ್ನು 9 ತಿಂಗಳು ಬಾಕಿ ಇದೆ. ಈ ಅವಧಿಗೆ ಚನ್ನವೀರಪ್ಪ ಅಧ್ಯಕ್ಷರಾಗಿ (President) ಮುಂದುವರೆಯಲಿದ್ದಾರೊ ಇಲ್ಲವೊ ಅನ್ನುವುದು ಇವತ್ತು ನಿರ್ಧಾರವಾಗಲಿದೆ.
ಕಾಂಗ್ರೆಸ್ ಪಕ್ಷ ಬೆಂಬಲಿತ ನಿರ್ದೇಶಕರು ಡಿಸಿಸಿ ಬ್ಯಾಂಕ್ ಅಧ್ಯಕ್ಷ (President) ಚನ್ನವೀರಪ್ಪ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ. ಗೊತ್ತುವಳಿ ಮಂಡನೆಗೆ ಜು.28ರಂದು ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಇವತ್ತು ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಕಾಂಗ್ರೆಸ್, ಬಿಜೆಪಿ ಮಧ್ಯೆ ಪ್ರತಿಷ್ಠೆಯ ವಿಚಾರವಾಗಿದೆ.
ಕಾಂಗ್ರೆಸ್ ನಿರ್ದೇಶಕರ ನಿರ್ಧಾರವೇನು?
ಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಬೆಂಬಲಿತ 7 ನಿರ್ದೇಶಕರಿದ್ದಾರೆ. ಎಲ್ಲರು ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಹಾಗಾಗಿ ಅಧ್ಯಕ್ಷ ಚನ್ನವೀರಪ್ಪ ವಿರುದ್ಧ ಕಾಂಗ್ರೆಸ್ ಪಕ್ಷದ 7 ಸದಸ್ಯರು ಮತ ಚಲಾಯಿಸುವುದು ನಿಶ್ಚಿತ. ಇನ್ನು, ಬಿಜೆಪಿ ಬೆಂಬಲಿತ 5 ನಿರ್ದೇಶಕರಿದ್ದಾರೆ. ಎಲ್ಲರು ಅಧ್ಯಕ್ಷ ಚನ್ನವೀರಪ್ಪ ಪರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಬೆಂಬಲಿತ ಓರ್ವ ನಿರ್ದೇಶಕರಿದ್ದಾರೆ.
9 ಮತ ಬೇಕು
ಅವಿಶ್ವಾಸ ಮಂಡಿಸಲು 9 ನಿರ್ದೇಶಕರ ಬೆಂಬಲ ಬೇಕು. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಗೆ ಇನ್ನು ಇಬ್ಬರು ಸದಸ್ಯರ ಬೆಂಬಲ ಅತ್ಯಗತ್ಯ. ಹಾಗಾಗಿ ಇವತ್ತಿನ ಅವಿಶ್ವಾಸ ಗೊತ್ತುವಳಿ ಸಭೆ ತೀವ್ರ ಕುತೂಹಲ ಮೂಡಿಸಿದೆ. ಆದರೆ ಕಾಂಗ್ರಸ್ ಬೆಂಬಲಿತ ನಿರ್ದೇಶಕರು ಅಧ್ಯಕ್ಷ ಚನ್ನವೀರಪ್ಪ ಅವರನ್ನು ಕೆಳಗಿಳಿಸಿವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಬಗ್ಗೆ ಕುತೂಹಲ
ಡಿಸಿಸಿ ಬ್ಯಾಂಕ್‌ನಲ್ಲಿ ಜೆ.ಪಿ.ಯೋಗೇಶ್ ಮಾತ್ರ ಜೆಡಿಎಸ್ ಬೆಂಬಲಿತ ನಿರ್ದೇಶಕ. ಇವರ ಬೆಂಬಲ ಯಾರಿಗೆ ಅನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಜೆ.ಪಿ.ಯೋಗೇಶ್ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಕಾಂಗ್ರೆಸ್ ಹಾದಿ ತುಸು ಸುಗಮವಾಗಿದೆ.
ಬಿಜೆಪಿಗೆ ಆಪರೇಷನ್?
ಇತ್ತ, ಡಿಸಿಸಿ ಬ್ಯಾಂಕ್‌ನಲ್ಲಾದರು ಅಧಿಕಾರ ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಬಿಗಿಪಟ್ಟು ಹಿಡಿದಿದೆ. ಅದಕ್ಕಾಗಿ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ನಿರ್ದೇಶಕರನ್ನು ತನ್ನತ್ತ ಸೆಳೆಯಲು ಪ್ರಯತ್ನ ನಡೆಸಿದೆ. ಇದು ಫಲ ಕೊಡಲಿದೆಯೆ ಅನ್ನುವುದು ಸದ್ಯಕ್ಕೆ ನಿಗೂಢ. ಈ ಮಧ್ಯೆ, ಬಿಜೆಪಿಗೇ ಆಪರೇಷನ್ ಮಾಡಲು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್ ಬುಕಿಂಗ್ ಆರಂಭ, ಎಷ್ಟಿದೆ ದರ? ಬುಕ್ ಮಾಡುವುದು ಹೇಗೆ?
ಬಿಜೆಪಿ ಪಾಳಯದ ಒಂದು ಮತ ಸಿಕ್ಕರು ಚನ್ನವೀರಪ್ಪ ಅಧ್ಯಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ. ಉಳಿದ 9 ತಿಂಗಳು ಕಾಂಗ್ರೆಸ್ ಪಕ್ಷ ಡಿಸಿಸಿ ಬ್ಯಾಂಕ್ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಸದ್ಯ ಯಾರು ಯಾರ ಪರವಾಗಿ ಮತ ಚಲಾಯಿಸಲಿದ್ದಾರೆ ಅನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422