ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 28 JULY 2023
SHIMOGA : ಬೆಂಗಳೂರು – ಶಿವಮೊಗ್ಗ ವಿಮಾನ ಹಾರಾಟಕ್ಕೆ ದಿನಗಣನೆ ಆರಂಭವಾಗಿದೆ. ಮೊದಲ ದಿನ ವಿಮಾನದಲ್ಲಿ ಹಾರುವ ಅವಕಾಶಕ್ಕಾಗಿ ಟಿಕೆಟ್ ಬುಕಿಂಗ್ ಬಿರುಸಾಗಿ ನಡೆಯುತ್ತಿದೆ. ಈಗಾಗಲೆ ಶೇ.50ರಷ್ಟು ಸೀಟುಗಳು ಭರ್ತಿಯಾಗಿದೆ. ಈ ಮಧ್ಯೆ ಶಿವಮೊಗ್ಗ ವಿಮಾನಗಳ ಟಿಕೆಟ್ (Ticket Price) ದರದಲ್ಲಿ ಕಡಿತ ಮಾಡಲಾಗಿದೆ.

ಶೇ.50ರಷ್ಟು ಸೀಟ್ ಭರ್ತಿ
ಆ.31ರಿಂದ ಬೆಂಗಳೂರು – ಶಿವಮೊಗ್ಗ ಮತ್ತು ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಗಲಿದೆ. ಇದಕ್ಕಾಗಿ ಬುಕಿಂಗ್ ಪ್ರಕ್ರಿಯೆ ಶುರುವಾಗಿದ್ದು ಜನರು ಉತ್ಸುಕರಾಗಿ ಸೀಟ್ ಕಾಯ್ದಿರಿಸುತ್ತಿದ್ದಾರೆ. ಈಗಾಗಲೇ ಶೇ.50ರಷ್ಟು ಸೀಟುಗಳು ಭರ್ತಿಯಾಗಿವೆ.
ಫ್ಲೈಟ್ ಸಂಖ್ಯೆ 6E 7731 – ಬೆಂಗಳೂರಿನಿಂದ ಶಿವಮೊಗ್ಗ – 75 ಸೀಟುಗಳ ಪೈಕಿ 33 ಬುಕ್ ಆಗಿವೆ. ಫ್ಲೈಟ್ ಸಂಖ್ಯೆ 6E 7732 – ಶಿವಮೊಗ್ಗದಿಂದ ಬೆಂಗಳೂರು – 75 ಸೀಟುಗಳ ಪೈಕಿ 45 ಬುಕ್ ಆಗಿವೆ. (ಗಮನಕ್ಕೆ : ಜು.28ರ ರಾತ್ರಿ ಈ ಸುದ್ದಿ ಪ್ರಕಟವಾಗುವ ಸಂದರ್ಭದ ಮಾಹಿತಿ)
ಟ್ರಾವಲ್ ಏಜೆನ್ಸಿಗಳತ್ತ ಜನ
ಇಂಡಿಗೋ ಸಂಸ್ಥೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಟಿಕೆಟ್ ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. ತನ್ನ ವೆಬ್‌ಸೈಟ್ ಮತ್ತು ಇತರೆ ಟ್ರಾವಲ್ ವೆಬ್‌ಸೈಟ್‌ಗಳ ಮೂಲಕ ಸೀಟ್ ಕಾಯ್ದಿರಿಸುವ ಅವಕಾಶವಿದೆ. ಇನ್ನು, ಶಿವಮೊಗ್ಗದಲ್ಲಿರುವ ಟ್ರಾವೆಲ್ ಏಜೆಂಟ್‌ಗಳಿಗು ಸೀಟ್ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ವಿವಿಧ ಟ್ರಾವೆಲ್ ಏಜೆನ್ಸಿಗಳಿಗೆ ಜನರು ಭೇಟಿ ನೀಡಿ, ಶಿವಮೊಗ್ಗ ಬೆಂಗಳೂರು ಮಾರ್ಗದ ವಿಮಾನದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

PHOTO | ಶಿವಮೊಗ್ಗದ ದುರ್ಗಿಗುಡಿಯ ಶುಭಂ ಹೊಟೇಲ್ ಎದುರಿನ ಬ್ಲೂಬೆಲ್ ಹಾಲಿಡೇಸ್ ಏಜೆನ್ಸಿಯಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಾಯಣಿಕರು | ಟಿಕೆಟ್ ಬುಕಿಂಗ್‌ಗೆ ಸಂಪರ್ಕಿಸಿ – 8123002917
ಟಿಕೆಟ್ ದರ ಇಳಿಕೆ
ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಟಿಕೆಟ್ ದರ (Ticket Price) ಇಳಿಕೆ ಮಾಡಿ ಪರಿಷ್ಕೃತ ದರ ಪ್ರಕಟಿಸಿದೆ. ಸದ್ಯ ಆ.31ರಂದು ಮೊದಲ ದಿನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸೇವರ್ ಮಾದರಿ ಟಿಕೆಟ್‌ಗೆ 8,264 ರೂ., ಫ್ಲೆಕ್ಸಿ ಪ್ಲಸ್ ಮಾದರಿ ಟಿಕೆಟ್‌ಗೆ 8,789 ರೂ. ಇದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಸೇವರ್ ಮಾದರಿ ಟಿಕೆಟ್‌ಗೆ 6,588 ರೂ. ಮತ್ತು ಫ್ಲೆಕ್ಸಿ ಪ್ಲಸ್ ಟಿಕೆಟ್ ದರ 7,113 ರೂ. ಇದೆ. (ಈ ಸುದ್ದಿ ಪ್ರಕಟವಾಗುವ ಸಂದರ್ಭದ ದರ)
ಸೆ.1ರಿಂದ ವಿಮಾನದ ಟಿಕೆಟ್ ದರ ಇಳಿಕೆ ಮಾಡಲಾಗಿದೆ. ಈ ಮೊದಲು ಇದ್ದ ದರವನ್ನು ಕಡಿತಗೊಳಿಸಲಾಗಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸೆ.1ರ ಟಕೆಟ್ ದರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 2,909 ರೂ. (SAVER), 3,230 (FLEXI PLUS), ಶಿವಮೊಗ್ಗದಿಂದ ಬೆಂಗಳೂರು 2,913 ರೂ. (SAVER), 3,306 ರೂ. (FLEXI PLUS) ಇದೆ.
ಸಾಮಾಜಿಕ ಜಾಲತಾಣದಲ್ಲಿ ಖುಷಿ
ಬೆಂಗಳೂರು – ಶಿವಮೊಗ್ಗ ಮಾರ್ಗದ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿರುವ ಹಲವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಟಿಕೆಟ್‌ಗಳ ಪ್ರತಿಯನ್ನು ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ – GOOD NEWS | ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್ ಬುಕಿಂಗ್ ಆರಂಭ, ಎಷ್ಟಿದೆ ದರ? ಬುಕ್ ಮಾಡುವುದು ಹೇಗೆ?
ಸದ್ಯ ಬೆಂಗಳೂರು – ಶಿವಮೊಗ್ಗ ಮಾರ್ಗದಲ್ಲಿ ಟಿಕೆಟ್ ಬುಕಿಂಗ್ ಬಿರುಸಾಗಿದೆ. ಈ ನಡುವೆ ಶಿವಮೊಗ್ಗದಿಂದ ಗೋವಾ, ತಿರುಪತಿ ಮತ್ತು ಹೈದರಾಬಾದ್‌ಗೆ ವಿಮಾನಯಾನ ಸೇವೆ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದು ಶಿವಮೊಗ್ಗದ ಜನರ ಖುಷಿಗೆ ಕಾರಣವಾಗಿದೆ.
.jpeg)

LATEST NEWS
- Three killed, several injured in soil cave-in at Hulikal Ghat

- BREAKING NEWS – ಹುಲಿಕಲ್ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

- PU RESULT: ಶಿವಮೊಗ್ಗದ ಮಹೀನ್ ಖಾನಮ್ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

- ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

About The Editor
ನಿತಿನ್ ಆರ್.ಕೈದೊಟ್ಲು











