ಸಾಗರದಲ್ಲಿ 50 ಲಕ್ಷ ರೂ. ವೆಚ್ಚದ ಕುಡಿಯುವ ನೀರು ತಪಾಸಣಾ ಘಟಕ, ಉದ್ಘಾಟನೆ ಬಳಿಕ MLA ಹೇಳಿದ 3 ಪ್ರಮುಖಾಂಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 30 JULY 2023

SAGARA : ಗಾಂಧಿನಗರದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಟ್ಟಡ, ಕುಡಿಯುವ ನೀರು ತಪಾಸಣಾ (Testing Unit) ಘಟಕವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಲೋಕಾರ್ಪಣೆ ಮಾಡಿದರು. 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡವು ಸಾಗರ, ಸೊರಬ ಮತ್ತು ಶಿಕಾರಿಪುರ ವ್ಯಾಪ್ತಿಗೆ ಒಳಪಡಲಿದೆ.

MLA-Beluru-Gopalakrishna-Inaugurates-Water-Testting-lab-at-sagara

ಬಳಿಕ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಮೂರು ಪ್ರಮುಖಾಂಶಗಳನ್ನು ಪ್ರಸ್ತಾಪಿಸಿದರು.

POINT 1 jpgಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಸಂಕಲ್ಪ. ಈ ಘಟಕದಲ್ಲಿ ಮಳೆಗಾಲಕ್ಕು ಮೊದಲು ಮತ್ತು ಮಳೆಗಾಲದ ಬಳಿಕ ನೀರಿನ ಪರೀಕ್ಷೆ ನಡೆಸಲಾಗುತ್ತದೆ. 16 ಮಾನದಂಡದಲ್ಲಿ ನೀರನ್ನು ಪರೀಕ್ಷಿಸಿ ವರದಿ ನೀಡಲಾಗುತ್ತದೆ.

POINT 2 jpgಮನೆ ಮನೆಗೆ ಗಂಗೆ ಯೋಜನೆಯಲ್ಲಿ ಸಾಗರ ತಾಲೂಕಿನ 46,500 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ಇದೆ. ಈತನಕ 6,700 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ.

POINT 3 jpgಶರಾವತಿ ಹಿನ್ನೀರು ಭಾಗದಿಂದ ಆವಿನಹಳ್ಳಿ ಮತ್ತು ಕಸಬಾ ಹೋಬಳಿಯ 13 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. 100 ಕೋಟಿ ರೂ. ವೆಚ್ಚದ ಯೋಜನೆ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ಎಲ್ಲ ಗ್ರಾಮಗಳಿಗು ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ.

ಇದನ್ನೂ ಓದಿ – ಕೊಡಚಾದ್ರಿ ಪ್ರವಾಸಿಗರಿಗೆ ಶಾಕ್‌ ನೀಡಿದ ವನ್ಯಜೀವಿ ವಿಭಾಗ, ಇವತ್ತಿನಿಂದ ಪ್ರವೇಶ ನಿಷೇಧ

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬಲರಾಮ ದುಬೆ, ಅಭಿಯಂತರ ಗುರುಕೃಷ್ಣ ಶೆಣೈ, ಚೇತನರಾಜ್‌ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ ಸೇರಿದಂತೆ ಹಲವರು ಈ ಸಂದರ್ಭ ಹಾಜರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment