ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 9 AUGUST 2023
SHIMOGA : ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ನೀರಾವರಿ ನಿಗಮ ತೀರ್ಮಾನಿದೆ. ಜತೆಗೆ ನೀರು ಕಡಿಮೆಯಾಗಿ ಬೆಳೆ ನಷ್ಟವಾದರೆ ಅದಕ್ಕೆ ಇಲಾಖೆ ಹೊಣೆಯಲ್ಲ ಎಂದು ಸಹ ತಿಳಿಸಿದೆ.
ಕಾಲುವೆಗಳಿಗೆ ಯಾವಾಗಿಂದ ನೀರು?
ಆ.10ರಿಂದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಜಲಾಶಯದಲ್ಲಿ ಪ್ರಸ್ತುತ 166 ಅಡಿ (ಗರಿಷ್ಠ 186 ಅಡಿ) ನೀರು ಇದೆ.
ಯಾವ್ಯಾವ ಕಾಲುವೆಗೆ ಎಷ್ಟು ನೀರು?
ಆ.10ರಿಂದ ನೂರು ದಿನಗಳ ಕಾಲ ಎಡದಂಡೆ ಕಾಲುವೆಗೆ 380 ಕ್ಯೂಸೆಕ್ಸ್, ಬಲದಂಡೆ ಕಾಲುವೆಗೆ 2650 ಕ್ಯೂಸೆಕ್ಸ್ ಹರಿಸಲಾಗುವುದು.
.jpeg)
ಒಳಹರಿವಿನ ಆಧಾರದ ಮೇಲೆ ನೀರು
ನೀರಿನ ಲಭ್ಯತೆ, ಒಳಹರಿವಿನ ಆಧಾರದ ಮೇಲೆ ನೀರು ಹರಿಸಲಾಗುತ್ತಿದೆ. ನೀರಿನ ಕೊರತೆಯಿಂದ ಬೆಳೆ ನಷ್ಟವಾದಲ್ಲಿ ಅದಕ್ಕೆ ಇಲಾಖೆ ಹೊಣೆಯಲ್ಲ. ಭದ್ರಾ ಜಲಾಶಯ ವ್ಯಾಪ್ತಿಯ 1.07 ಲಕ್ಷ ಹೆಕ್ಟೇರ್‌ನಲ್ಲಿ ಪ್ರಕಟಿತ ಮುಂಗಾರು ಬೆಳೆ ಬೆಳೆಯಲು ಅವಕಾಶವಿದ್ದು ನಿಗದಿತ ವಿಸ್ತೀರ್ಣದಲ್ಲಿ ಬೆಳೆ ಬೆಳೆದು ರೈತರು ಸಹಕರಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ – ಒಂದೇ ಸೇತುವೆ ಬಳಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ, ಒಬ್ಬನ ಸ್ಥಿತಿ ಗಂಭೀರ
ನಷ್ಟಕ್ಕೆ ರೈತರೆ ಹೊಣೆ
ಬೇರೆ ಬೆಳೆ ಬೆಳೆದು ನಷ್ಟ ಅನುಭವಿಸಿದರೆ ಅದಕ್ಕೆ ರೈತರೆ ನೇರ ಹೊಣೆ ಎಂದು ಆದೇಶಿಸಲಾಗಿದೆ.
72 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 49 ಟಿಎಂಸಿ ಮಾತ್ರ ನೀರಿದೆ. ಮಳೆ ಕೈಕೊಟ್ಟರೆ ರೈತರು ನಷ್ಟ ಅನುಭವಿಸುವುದು ಖಚಿತ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






