ಮನೆ ಮೇಲೆ ಪೊಲೀಸ್‌ ದಾಳಿ, ಹಿತ್ತಲಲ್ಲಿ ಅಡಿಕೆ ಗಿಡಗಳ ಮಧ್ಯೆ ಶೋಧ, ಮಾಲೀಕನ ವಿರುದ್ಧ ದಾಖಲಾಯ್ತು ಕೇಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 AUGUST 2023

SORABA : ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ (Police Raid) ನಡೆಸಿದ ಪೊಲೀಸರು ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ್ದಾರೆ. 525 ಗ್ರಾಂ ತೂಕದ ಗಾಂಜಾ ಗಿಡಗಳು ಸಿಕ್ಕಿವೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Police-Raid-on-a-house-at-Kadasuru-In-soraba-taluk

ಸೊರಬ ತಾಲೂಕು ಕಡಸೂರು (Kadasuru) ಗ್ರಾಮದ ರಾಮಚಂದ್ರಪ್ಪ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಮನೆಯ ಹಿತ್ತಲಿನಲ್ಲಿ ಅಡಿಕೆ ಗಿಡಗಳ ಮಧ್ಯೆ ಸಿಮೆಂಟ್‌ ಚೀಲದಲ್ಲಿ ಮಣ್ಣು ತುಂಬಿ ಗಾಂಜಾ ಬೆಳೆಯಲಾಗಿತ್ತು. 525 ಗ್ರಾಂ ತೂಕದ ಅಂದಾಜು 3 ಸಾವಿರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ – ಚಂದ್ರಗುತ್ತಿ ದೇವಸ್ಥಾನದಲ್ಲಿ ಕಳ್ಳತನ ಯತ್ನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌, ಮೂವರು ಅರೆಸ್ಟ್‌, ವಿಚಾರಣೆ ವೇಳೆ ಹೇಳಿದ್ದೇನು?

ಸೊರಬ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಮಾಳಪ್ಪ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಮಚಂದ್ರಪ್ಪ ವಿರುದ್ಧ ಎನ್‌ಡಿಪಿಎಸ್‌ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PARISHRAMA Neet Academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment