ಕೊನೆಗು ಕುವೆಂಪು ವಿವಿಗೆ ಪ್ರಭಾರ ಕುಲಪತಿ ನೇಮಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 AUGUST 2023

SHANKARAGHATTA : ಕುವೆಂಪು ವಿಶ್ವವಿದ್ಯಾಲಯಕ್ಕೆ (Kuempu University) ಕೊನೆಗು ಪ್ರಭಾರ ಕುಲಪತಿ (Vice Chancellor) ನೇಮಿಸಲಾಗಿದೆ. ಪ್ರೊ. ಎಸ್‌.ವೆಂಕಟೇಶ್‌ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಿಸಿ ರಾಜ್ಯಪಾಲರು (Governor) ಆದೇಶ ಹೊರಡಿಸಿದ್ದಾರೆ.

ಪ್ರೊ. ಎಸ್‌.ವೆಂಕಟೇಶ್‌ ಅವರು ಇವತ್ತು ಪ್ರಭಾರ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ ಡೀನ್‌ ಮತ್ತು ವಾಣಿಜ್ಯ ಶಾಸ್ತ್ರ (Commerce) ವಿಭಾಗದ ಅಧ್ಯಕ್ಷರಾಗಿದ್ದಾರೆ. ಎರಡು ದಶಕಕ್ಕು ಹೆಚ್ಚಿನ ಅಧ್ಯಾಪನ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ – ಕುವೆಂಪು ವಿವಿ ಕುಲಸಚಿವರ ದಿಢೀರ್‌ ಬದಲಾವಣೆ, ಹೊಸ ರಿಜಿಸ್ಟ್ರಾರ್‌ ಅಧಿಕಾರ ಸ್ವೀಕಾರ

ತಡವಾಗಿ ಪ್ರಭಾರ ಕುಲಪತಿ ನೇಮಕ

ಪ್ರೊ. ಬಿ.ಪಿ.ವೀರಭದ್ರಪ್ಪ ಅವರ ನಿವೃತ್ತಿಯಿಂದಾಗಿ ಕುಲಪತಿ ಹುದ್ದೆ ತೆರವಾಗಿತ್ತು. ನೂತನ ಕುಲಪತಿ ನೇಮಕ ವಿಚಾರ ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಕುಲಪತಿ ಹುದ್ದೆಗೆ ಮೂರ್ನಾಲ್ಕು ಆಕಾಂಕ್ಷಿಗಳಿದ್ದು, ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ಸುಗಮ ಆಡಳಿತದ ದೃಷ್ಟಿಯಿಂದ ಪ್ರಭಾರ ಕುಲಪತಿ ನೇಮಕ ಮಾಡಬೇಕಿತ್ತು. ಆದರೆ 15 ದಿನ ತಡವಾಗಿ ಪ್ರಭಾರ ಕುಲಪತಿ ನೇಮಿಸಲಾಗಿದೆ.

PARISHRAMA neet academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 16, 2023

Leave a Comment